ADVERTISEMENT

ಇಪಿಎಸ್‌–95 ಪರಿಷ್ಕರಣೆ?

ಪಿಟಿಐ
Published 28 ನವೆಂಬರ್ 2024, 16:30 IST
Last Updated 28 ನವೆಂಬರ್ 2024, 16:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಕಾರ್ಮಿಕ ಸಚಿವಾಲಯವು ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್‌) 1995 ಅನ್ನು ಪರಿಷ್ಕರಿಸಲು ನಿರ್ಧರಿಸಿದೆ. ಆ ಮೂಲಕ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಸದಸ್ಯರಿಗೆ ನಿವೃತ್ತಿ ವೇಳೆ ಹೆಚ್ಚಿನ ಅನುಕೂಲ ಕಲ್ಪಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಉದ್ಯೋಗಿಗಳ ಮೂಲ ವೇತನದಲ್ಲಿ ಕಡಿತಗೊಳಿಸುವ ಶೇ 12ರಷ್ಟು ಹಣವು  ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಫ್) ಜಮೆಯಾಗುತ್ತದೆ. ಉದ್ಯೋಗದಾತ ಸಂಸ್ಥೆಯು ಇಷ್ಟೇ ಮೊತ್ತವನ್ನು ಪಾವತಿಸಲಿದೆ. ಇದರಲ್ಲಿ ಶೇ 8.33ರಷ್ಟು ಹಣವು ಇಪಿಎಸ್‌–95ಗೆ ಜಮೆಯಾದರೆ, ಉಳಿದ ಶೇ 3.67ರಷ್ಟು ಮೊತ್ತವು ಇಪಿಎಫ್‌ ಖಾತೆಗೆ ಜಮೆಯಾಗುತ್ತದೆ.

ಉದ್ಯೋಗಿಗಳು ಇಪಿಎಸ್-95 ಖಾತೆಗೆ ಹೆಚ್ಚು ಕೊಡುಗೆ ನೀಡಿದರೆ ನಿವೃತ್ತಿ ವೇಳೆ ಅವರಿಗೆ ಹೆಚ್ಚಿನ ಪಿಂಚಣಿ ಮೊತ್ತ ದೊರೆಯಲಿದೆ. ಹಾಗಾಗಿ, ಇಪಿಎಸ್‌ಗೆ ನೀಡುವ ಕೊಡುಗೆ ಹೆಚ್ಚಿಸಲು ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ADVERTISEMENT

ಉದ್ಯೋಗಿಗಳ ಭವಿಷ್ಯ ನಿಧಿ ಪಿಂಚಣಿ ಲೆಕ್ಕಾಚಾರಕ್ಕೆ ಪ್ರಸ್ತುತ ₹15 ಸಾವಿರ ಗರಿಷ್ಠ ವೇತನ ಮಿತಿ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.