ADVERTISEMENT

ಗೋವಾದ ಬ್ಲಿಸ್‌ವಾಟರ್ ಇಂಡಸ್ಟ್ರೀಸ್‌ನಿಂದ ‘ಯಕ್ಷ ಬ್ಲೂಮೂನ್’ ವಿಸ್ಕಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 13:54 IST
Last Updated 7 ಜನವರಿ 2025, 13:54 IST
ಯಕ್ಷ ಬ್ಲೂಮೂನ್‌ ವಿಸ್ಕಿ
ಯಕ್ಷ ಬ್ಲೂಮೂನ್‌ ವಿಸ್ಕಿ   

ಬೆಂಗಳೂರು: ಗೋವಾದ ಬ್ಲಿಸ್‌ವಾಟರ್ ಇಂಡಸ್ಟ್ರೀಸ್‌ನಿಂದ (ಹೌಸ್ ಆಫ್ ಬ್ಲಿಸ್‌ವಾಟರ್) ‘ಯಕ್ಷ ಬ್ಲೂಮೂನ್’ ಹೆಸರಿನ ವಿಸ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನ ಡ್ಯೂಟಿ-ಫ್ರೀ ಮಳಿಗೆ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಸ್ಕಿ ಲಭ್ಯವಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಕೇವಲ 1,200 ಬಾಟಲಿಗಳನ್ನು ಮಾತ್ರವೇ ತಯಾರಿಸಲಾಗಿದೆ ಎಂದು ಕಂಪನಿಯು ಮಂಗಳವಾರ ತಿಳಿಸಿದೆ.

ಪ್ರತಿ ಬಾಟಲಿಯು 92.5 ಶುದ್ಧ ಸ್ಟರ್ಲಿಂಗ್ ಸಿಲ್ವರ್ ಟ್ಯಾಗ್‌ನೊಂದಿಗೆ ದೊರೆಯಲಿದೆ. ಇದರಲ್ಲಿ ಬ್ರ್ಯಾಂಡ್‌ ಹೆಸರು, ಉತ್ಪಾದನೆಯ ವರ್ಷ, ಬಾಟಲ್ ಮತ್ತು ಬ್ಯಾಚ್‌ ಸಂಖ್ಯೆ ನಮೂದಿಸಲಾಗಿದೆ. ಡ್ಯೂಟಿ-ಫ್ರೀ ಮಳಿಗೆಯಲ್ಲಿ ಪ್ರತಿ ಬಾಟಲಿಯ ಬೆಲೆಗೆ ₹13,719 (160 ಡಾಲರ್‌) ಆಗಿದೆ ಎಂದು ತಿಳಿಸಿದೆ.

ADVERTISEMENT

‘ಕಾಶ್ಮೀರದ ಕೇಸರಿ, ನೀಲಗಿರಿಯ ಜಾಯಿಕಾಯಿ ಸೇರಿ ವಿಶಿಷ್ಟ ಸಸ್ಯಜನ್ಯ ಪದಾರ್ಥಗಳಿಂದ ತಯಾರಿಸಿರುವ ಈ ವಿಸ್ಕಿಯು ವಿಭಿನ್ನ ರುಚಿ ಹೊಂದಿದೆ. ಪ್ರೀಮಿಯಂ ಇಂಡಿಯನ್ ಮಾಲ್ಟ್ ಹಾಗೂ ಐದು ವರ್ಷದಷ್ಟು ಹಳೆಯದಾದ ಸ್ಕಾಚ್ ಮಾಲ್ಟ್‌ನೊಂದಿಗೆ ಹದವಾಗಿ ಬೆರೆಸಲಾಗಿದೆ. ಅಪರಿಮಿತ ಸ್ವಾದ ಹಾಗೂ ಸುವಾಸನೆ ಹೊಂದಿದೆ’ ಎಂದು ಬ್ಲಿಸ್‌ವಾಟರ್ ಇಂಡಸ್ಟ್ರೀಸ್‌ ಸಂಸ್ಥಾಪಕಿ ಮತ್ತು ಮಾಸ್ಟರ್ ಬ್ಲೆಂಡರ್ ವರ್ಣಾ ಭಟ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.