
ಪಿಟಿಐ
ಎಐ ಚಿತ್ರ
ಮುಂಬೈ: ಕೃತಕ ಬುದ್ಧಿಮತ್ತೆಯ (ಎ.ಐ) ಕಾಲಘಟ್ಟದಲ್ಲಿ ಕಂಪನಿಗಳ ಆಡಳಿತ ಮಂಡಳಿಗಳು ತೆರೆಯ ಹಿಂದಿನಿಂದ ಮಾರ್ಗದರ್ಶನ ನೀಡುವ ನಾಯಕತ್ವದ ಮಾದರಿಗೆ ಆದ್ಯತೆ ನೀಡಬೇಕು ಎಂದು ಜಾಗತಿಕ ಮಟ್ಟದ ಉದ್ದಿಮೆಗಳ ಸಲಹೆಗಾರ ರಾಮ್ ಚರಣ್ ಅವರು ಹೇಳಿದ್ದಾರೆ.
ಎ.ಐ. ಕಾಲಘಟ್ಟದಲ್ಲಿ ಸಿಇಒ ಆಯ್ಕೆ ಮತ್ತು ನಾಯಕತ್ವದ ಸ್ಥಾನದಲ್ಲಿರುವವರ ವರ್ತನೆಗಳು ಯಾವ ಕಂಪನಿಯು ಬೆಳವಣಿಗೆ ಕಾಣುತ್ತದೆ ಎಂಬುದನ್ನು ನಿರ್ಧರಿಸುತ್ತವೆ; ತಂತ್ರಜ್ಞಾನವೊಂದೇ ಇಲ್ಲಿ ಪರಿಗಣಿತವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.