ADVERTISEMENT

ಬಡ್ಡಿದರ ಇಳಿಸಿದ ಎಲ್‌ಐಸಿ ಹೌಸಿಂಗ್‌, ಕೆನರಾ, ಇಂಡಿಯನ್ ಬ್ಯಾಂಕ್‌

ಪಿಟಿಐ
Published 25 ಏಪ್ರಿಲ್ 2025, 15:40 IST
Last Updated 25 ಏಪ್ರಿಲ್ 2025, 15:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ ಕಂಪನಿ, ಇಂಡಿಯನ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌, ರೆಪೊ ಆಧರಿತ ಬಡ್ಡಿದರವನ್ನು ಕಡಿತಗೊಳಿಸಿವೆ. 

ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರ ಕಡಿತಗೊಳಿಸಿರುವ ಬೆನ್ನಲ್ಲೇ ಈ ಕ್ರಮ ಕೈಗೊಂಡಿವೆ. 

ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ ಕಂಪನಿಯು ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ಕಡಿತಗೊಳಿಸಿದೆ. ಈ ಬಡ್ಡಿದರ ಕಡಿತದ ಪ್ರಯೋಜನವು ಹಾಲಿ ಸಾಲಗಾರರು ಮತ್ತು ಹೊಸದಾಗಿ ಸಾಲ ‍ಪಡೆಯುವವರಿಗೂ ಅನ್ವಯಿಸಲಿದೆ. ಗೃಹ ಸಾಲದ ಮೇಲಿನ ಬಡ್ಡಿದರವು ಶೇ 8ರಿಂದ ಶುರುವಾಗಲಿದೆ. ಪರಿಷ್ಕೃತ ಆದೇಶವು ಏಪ್ರಿಲ್‌ 28ರಿಂದ ಜಾರಿಗೆ ಬರಲಿದೆ ಎಂದು ಕಂಪನಿಯು ತಿಳಿಸಿದೆ.

ADVERTISEMENT

ಇಂಡಿಯನ್‌ ಬ್ಯಾಂಕ್‌: ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಬ್ಯಾಂಕ್‌ ಗೃಹ ಮತ್ತು ವಾಹನ ಸಾಲದ ಮೇಲಿನ ಬಡ್ಡಿದರವನ್ನು ಕಡಿತ ಮಾಡಿದೆ. ಗೃಹ ಸಾಲದ ವಾರ್ಷಿಕ ಬಡ್ಡಿದರ ಶೇ 8.15 ಇತ್ತು. ಇದನ್ನು ಶೇ 7.90ಕ್ಕೆ ಪರಿಷ್ಕರಿಸಿದೆ. ವಾಹನ ಸಾಲವು ಶೇ 8.50ರಿಂದ ಶೇ 8.25ಕ್ಕೆ ಇಳಿದಿದೆ. ಸಂಸ್ಕರಣಾ ಶುಲ್ಕದಲ್ಲಿ ಬ್ಯಾಂಕ್‌ ರಿಯಾಯಿತಿ ನೀಡಿದೆ. ಅಲ್ಲದೆ, ದಸ್ತಾವೇಜಿನ ಶುಲ್ಕವನ್ನೂ ಶೂನ್ಯಕ್ಕೆ ಇಳಿಸಿದೆ. 

ಕೆನರಾ ಬ್ಯಾಂಕ್‌: ಕೆನರಾ ಬ್ಯಾಂಕ್‌ ಗೃಹ ಸಾಲ ಶೇ 7.90 ಮತ್ತು ವಾಹನ ಸಾಲ ಶೇ 8.20ರಿಂದ ಆರಂಭವಾಗಲಿದೆ. ದರ ಪರಿಷ್ಕರಣೆಯು ಏಪ್ರಿಲ್‌ 12ರಿಂದಲೇ ಜಾರಿಗೆ ಬಂದಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಬ್ಯಾಂಕ್‌

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.