ನವದೆಹಲಿ: ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಕಂಪನಿಯು ರೆಪೊ ಆಧರಿತ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ಕಡಿತಗೊಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಕಡಿತಗೊಳಿಸಿರುವ ಬೆನ್ನಲ್ಲೇ ಈ ಕ್ರಮಕೈಗೊಂಡಿದೆ. ಈಗಾಗಲೇ, ಹಲವು ಬ್ಯಾಂಕ್‌ಗಳು ಬಡ್ಡಿದರ ಕಡಿತಗೊಳಿಸಿ ಸಾಲಗಾರಿಗೆ ಪ್ರಯೋಜನ ಕಲ್ಪಿಸಿವೆ.
ಈ ಬಡ್ಡಿದರ ಕಡಿತದ ಪ್ರಯೋಜನವು ಹಾಲಿ ಸಾಲಗಾರರು ಮತ್ತು ಹೊಸದಾಗಿ ಸಾಲ ಪಡೆಯುವವರಿಗೂ ಅನ್ವಯಿಸಲಿದೆ. ಗೃಹ ಸಾಲದ ಮೇಲಿನ ಬಡ್ಡಿದರವು ಶೇ 8ರಿಂದ ಶುರುವಾಗಲಿದೆ. ಪರಿಷ್ಕೃತ ಆದೇಶವು ಏಪ್ರಿಲ್ 28ರಿಂದ ಜಾರಿಗೆ ಬರಲಿದೆ ಎಂದು ಕಂಪನಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.