ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ‘ಸರಳ್ ಪೆನ್ಶನ್’ ಹೆಸರಿನಲ್ಲಿ ಆ್ಯನ್ಯುಟಿ ಯೋಜನೆಯನ್ನು ಆರಂಭಿಸಿದೆ.
ಇದರ ಅಡಿಯಲ್ಲಿ ವಿಮಾ ಪ್ರೀಮಿಯಂ ಮೊತ್ತವನ್ನು ಒಂದು ಬಾರಿಗೆ ಪಾವತಿಸಬೇಕು, ಪಿಂಚಣಿ ಸೌಲಭ್ಯವು ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಎಲ್ಐಸಿ ಪ್ರಕಟಣೆ ತಿಳಿಸಿದೆ.
ಈ ಯೋಜನೆಯನ್ನು ಎಲ್‌ಐಸಿ ಶಾಖೆಗಳಿಂದ ಅಥವಾ www.licindia.in ವೆಬ್‌ಸೈಟ್ ಮೂಲಕ ಖರೀದಿಸಬಹುದು. ಪಿಂಚಣಿ ಮೊತ್ತವನ್ನು ವರ್ಷಕ್ಕೊಮ್ಮೆ, ವರ್ಷಕ್ಕೆ ಎರಡು ಬಾರಿ, ಮೂರು ತಿಂಗಳಿಗೆ ಒಮ್ಮೆ ಅಥವಾ ತಿಂಗಳಿಗೆ ಒಮ್ಮೆ ಪಡೆದುಕೊಳ್ಳುವ ಆಯ್ಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.