
ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಅಂಗಸಂಸ್ಥೆ ಎಲ್ಐಸಿ ಮ್ಯೂಚುವಲ್ ಫಂಡ್, ತಂತ್ರಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ಒದಗಿಸಲು ವಿಷಯಾಧಾರಿತ ಈಕ್ವಿಟಿ ಯೋಜನೆ ‘ಎಲ್ಐಸಿ ಎಂಎಫ್ ಟೆಕ್ನಾಲಜಿ ಫಂಡ್’ ಬಿಡುಗಡೆ ಮಾಡಿದೆ.
ಈ ಎನ್‌ಎಫ್‌ಒ (ನ್ಯೂ ಫಂಡ್ ಆಫರ್) ಫೆಬ್ರುವರಿ 20ರಿಂದ ಆರಂಭವಾಗಿ ಮಾರ್ಚ್ 6ರಂದು ಕೊನೆಗೊಳ್ಳಲಿದೆ. ಈ ಯೋಜನೆಯು ಮಾರ್ಚ್ 19ರಂದು ಮತ್ತೆ ಹೂಡಿಕೆಗೆ ಲಭ್ಯವಿರುತ್ತದೆ ಎಂದು ಎಲ್ಐಸಿ ಮ್ಯೂಚುವಲ್ ಫಂಡ್ ಪ್ರಕಟಣೆಯಲ್ಲಿ ತಿಳಿಸಿದೆ.
ಕೃತಕ ಬುದ್ಧಿಮತ್ತೆ (ಎ.ಐ) ಕಂಪನಿಗಳು, ದತ್ತಾಂಶ ಕೇಂದ್ರಗಳ ನಿರ್ವಹಣಾ ಕಂಪನಿಗಳು, ಇ–ವಾಣಜ್ಯ ಕಂಪನಿಗಳು, ಸೆಮಿಕಂಡಕ್ಟರ್ ಕಂಪನಿಗಳು, ಇಂಟರ್ನೆಟ್ ಆಧಾರಿತ ಉದ್ದಿಮೆಗಳು ಹಾಗೂ ಉದಯೋನ್ಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಹಾಗೂ ತಂತ್ರಜ್ಞಾನ ಆಧಾರಿತ ವಲಯಗಳಲ್ಲಿ ಹೂಡಿಕೆ ಮಾಡುವ ಫಂಡ್ ಇದಾಗಿದೆ.
ಈ ಫಂಡ್ ಅನ್ನು ಕರಣ್ ದೋಷಿ ಮತ್ತು ಜೈಪ್ರಕಾಶ್ ತೋಷ್ನಿವಾಲ್ ಜಂಟಿಯಾಗಿ ನಿರ್ವಹಿಸಲಿದ್ದಾರೆ.
‘ದೇಶದ ತಂತ್ರಜ್ಞಾನ ವ್ಯವಸ್ಥೆಯು ಸೆಮಿಕಂಡಕ್ಟರ್ ತಯಾರಿಕೆಯಿಂದ ಎ.ಐ ಅಳವಡಿಕೆಯವರೆಗೆ ಮುನ್ನಡೆಯುತ್ತಿದೆ, ಈ ವಲಯದ ಕಂಪನಿಗಳಲ್ಲಿ ಹೂಡಿಕೆಯಿಂದ ದೀರ್ಘಾವಧಿಯಲ್ಲಿ ಉತ್ತಮ ಅವಕಾಶ ಸಿಗಬಹುದು ಎಂದು ನಿರೀಕ್ಷಿಸುತ್ತಿದ್ದೇವೆ’ ಎಂದು ಎಲ್ಐಸಿ ಮ್ಯೂಚುವಲ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆರ್.ಕೆ. ಝಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.