ADVERTISEMENT

ಮಹಿಳಾ ದಿನಾಚರಣೆ | ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಘೋಷಿಸಿದ ಎಲ್ ಆ್ಯಂಡ್ ಟಿ

ಪಿಟಿಐ
Published 6 ಮಾರ್ಚ್ 2025, 15:58 IST
Last Updated 6 ಮಾರ್ಚ್ 2025, 15:58 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಮುಂಬೈ: ಕಾರ್ಪೊರೇಟ್‌ ವಲಯದಲ್ಲಿ ಮೊದಲ ಬಾರಿಗೆ ಎಲ್‌ ಆ್ಯಂಡ್‌ ಟಿ ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳಿಗೆ ವೇತನಸಹಿತ ಒಂದು ದಿನದ ಮುಟ್ಟಿನ ರಜೆ ಘೋಷಿಸಿದೆ. ಇದರಿಂದ ಕಂಪನಿಯ 5 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಂಪನಿಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸುಬ್ರಹ್ಮಣ್ಯನ್ ಅವರು, ಈ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿವೆ.

ADVERTISEMENT

ಈ ರಜೆಯನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬ ಬಗ್ಗೆ ಸ್ಪಷ್ಟ ವಿವರವನ್ನು ಕಂಪನಿಯ ಅಧಿಕಾರಿಗಳು ಶೀಘ್ರವೇ ರೂಪಿಸಲಿದ್ದಾರೆ ಎಂದು ಹೇಳಲಾಗಿದೆ. ರಜೆ ಸೌಲಭ್ಯವು ಎಲ್‌ ಆ್ಯಂಡ್‌ ಟಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳಿಗಷ್ಟೇ ಅನ್ವಯಿಸಲಿದೆ. ಇದರ ಅಂಗಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿವೆ.

ಎಲ್‌ ಆ್ಯಂಡ್‌ ಟಿ ಕಂಪನಿಯಲ್ಲಿ ಒಟ್ಟು 60 ಸಾವಿರ ಉದ್ಯೋಗಿಗಳಿದ್ದಾರೆ. ಈ ಪೈಕಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ 5ರಷ್ಟಿದೆ.

ಈ ಹಿಂದೆ ಸ್ವಿಗ್ಗಿ, ಜೊಮಾಟೊ ಕಂಪನಿಗಳು ಮುಟ್ಟಿನ ರಜೆ ಘೋಷಿಸಿದ್ದರು. ಬಿಹಾರ, ಒಡಿಶಾ, ಸಿಕ್ಕಿಂ ಹಾಗೂ ಕೇರಳದಲ್ಲಿ  ಮುಟ್ಟಿನ ರಜೆ ಸೌಲಭ್ಯ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.