ಮಹಾಕುಂಭ ಮೇಳ
ನವದೆಹಲಿ: ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನಗಳ ಟಿಕೆಟ್ ದರ ದುಪ್ಪಟ್ಟಾಗಿದೆ. ಅದೇ ರೀತಿ ಮುಂಗಡ ಟಿಕೆಟ್ ಖರೀದಿ ಸಂಖ್ಯೆಯೂ ಹೆಚ್ಚಳವಾಗಿದೆ.
ಟ್ರಾವೆಲ್ ಪೋರ್ಟಲ್ ಇಕ್ಸಿಗೊ ಪ್ರಕಾರ, ಭೋಪಾಲ್– ಪ್ರಯಾಗ್‌ರಾಜ್ ನಡುವಿನ ವಿಮಾನ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 489ರಷ್ಟು ಏರಿಕೆಯಾಗಿದ್ದು, ₹2,977 ಇದ್ದ ಟಿಕೆಟ್ ದರ ಈ ಬಾರಿ ₹17,796ಕ್ಕೆ ತಲುಪಿದೆ. ಇದು ಒಂದು ಮಾರ್ಗದ ದರವಾಗಿದೆ.
ಬೆಂಗಳೂರು– ಪ್ರಯಾಗ್‌ರಾಜ್ ಟಿಕೆಟ್ ದರ ಶೇ 89ರಷ್ಟು ಏರಿಕೆಯಾಗಿದ್ದು ₹11,158 ಆಗಿದೆ. ಇದೇ ವೇಳೆ ಅಹಮದಾಬಾದ್– ಪ್ರಯಾಗ್‌ರಾಜ್ ಶೇ 41 ರಷ್ಟು ಏರಿಕೆಯಾಗಿ ಟಿಕೆಟ್ ದರ 10, 364 ಆಗಿದೆ.
ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 2025 ರ ಜನವರಿ 13 ರಿಂದ ಫೆಬ್ರುವರಿ 26 ರವರೆಗೆ 30 ದಿನಗಳ ಮುಂಗಡ ಟಿಕೆಟ್ ಖರೀದಿ ದಿನಾಂಕ ಆಧಾರದ ಮೇಲೆ ಏರಿಕೆಯಾದ ಸರಾಸರಿ ದರವಾಗಿದೆ.
ದೆಹಲಿ – ಪ್ರಯಾಗ್‌ರಾಜ್ ನಡುವೆ ಶೇ 21ರಷ್ಟು ಏರಿಕೆಯಾಗಿದ್ದು, ಟಿಕೆಟ್ ದರ ₹5,748 ಆಗಿದೆ. ಮುಂಬೈ –ಪ್ರಯಾಗ್‌ರಾಜ್ ನಡುವೆ ಶೇ 13 ಏರಿಕೆಯಾಗಿದ್ದು, ಟಿಕೆಟ್ ದರ ₹6381ಕ್ಕೆ ತಲುಪಿದೆ.
ಪ್ರಯಾಗ್‌ರಾಜ್‌ಗೆ 20 ಪ್ರದೇಶಗಳಿಂದ ನೇರ ವಿಮಾನ ಸಂಪರ್ಕವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.