ADVERTISEMENT

ಮಹೀಂದ್ರ ಡೀಲರ್‌ಶಿಪ್‌ಗಳಲ್ಲಿ ಜಿಯೊ–ಬಿಪಿ ಚಾರ್ಜಿಂಗ್ ಕೇಂದ್ರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 16:44 IST
Last Updated 11 ಅಕ್ಟೋಬರ್ 2022, 16:44 IST
   

ಬೆಂಗಳೂರು: ಮಹೀಂದ್ರ ಆ್ಯಂಡ್‌ ಮಹೀಂದ್ರ ಹಾಗೂ ಜಿಯೊ–ಬಿಪಿ ಕಂಪನಿಗಳು ಒಟ್ಟಾಗಿ, ಮಹೀಂದ್ರ ಕಂಪನಿಯು ವಿದ್ಯುತ್ ಚಾಲಿತ ಎಸ್‌ಯುವಿ ವಾಹನಗಳಿಗಾಗಿ ಚಾರ್ಜಿಂಗ್‌ ಮೂಲಸೌಕರ್ಯ ಕಲ್ಪಿಸಲಿವೆ.

‘ಜಿಯೊ–ಬಿಪಿ’ ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಬಿಪಿ ನಡುವಿನ ಜಂಟಿ ಪಾಲುದಾರಿಕೆಯ ಕಂಪನಿ. ಆರಂಭಿಕ ಹಂತದಲ್ಲಿ 16 ನಗರಗಳಲ್ಲಿ ಜಿಯೊ–ಬಿಪಿ ಕಂಪನಿಯು ಫಾಸ್ಟ್‌ ಚಾರ್ಜಿಂಗ್‌ ಕೇಂದ್ರಗಳನ್ನು ಮಹೀಂದ್ರ ಆ್ಯಂಡ್‌ ಮಹೀಂದ್ರ ಡೀಲರ್‌ಶಿಪ್‌ಗಳಲ್ಲಿ ಆರಂಭಿಸಲಿದೆ. ಮಹೀಂದ್ರ ಕಂಪನಿಯ ವರ್ಕ್‌ಶಾಪ್‌ಗಳಲ್ಲಿಯೂ ಈ ಸೌಲಭ್ಯ ಕಲ್ಪಿಸಲಾಗುತ್ತದೆ.

ಈ ಚಾರ್ಜಿಂಗ್‌ ಕೇಂದ್ರಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಿ ಇರಲಿವೆ ಎಂದು ಪ್ರಕಟಣೆ ತಿಳಿಸಿದೆ. ಮಹೀಂದ್ರ ಕಂಪನಿಯು ತನ್ನ ವಿದ್ಯುತ್ ಚಾಲಿತ ಎಸ್‌ಯುವಿ ‘ಎಕ್ಸ್‌ಯುವಿ4ಒಒ’ ಅದನ್ನು ಈಚೆಗೆ ಅನಾವರಣ ಮಾಡಿದೆ. ಜಿಯೊ–ಬಿಪಿ ಕಂಪನಿಯು ಪ್ರಮುಖ ನಗರಗಳಲ್ಲಿ, ಪ್ರಮುಖ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.