ನವದೆಹಲಿ: ‘ಮಾರುಕಟ್ಟೆ ಶಕ್ತಿಗಳು ರೂಪಾಯಿ ಮೌಲ್ಯವನ್ನು ನಿರ್ಧರಿಸುತ್ತವೆ. ದಿನನಿತ್ಯದ ಕರೆನ್ಸಿ ಮೌಲ್ಯದ ಏರಿಳಿತದ ಬಗ್ಗೆ ಆರ್‌ಬಿಐ ಚಿಂತಿಸುವುದಿಲ್ಲ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಮಧ್ಯಮದಿಂದ ದೀರ್ಘಾವಧಿಯ ರೂಪಾಯಿ ಮೌಲ್ಯದ ಮೇಲೆ ಆರ್‌ಬಿಐ ಗಮನಹರಿಸುತ್ತದೆ. ಡಾಲರ್ ಮೌಲ್ಯ ಏರಿಕೆಯಿಂದ ರೂಪಾಯಿ ಇಳಿಕೆಯಾಗುತ್ತಿದೆ. ಶೇ 5ರಷ್ಟು ಇಳಿಕೆಯಾದರೆ ಅದು ಹಣದುಬ್ಬರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಮುಂದಿನ ಹಣಕಾಸು ವರ್ಷದ ಬೆಳವಣಿಗೆ ಮತ್ತು ಹಣದುಬ್ಬರದ ಅಂದಾಜನ್ನು ರೂಪಿಸುವಾಗ ಆರ್‌ಬಿಐ ಪ್ರಸ್ತುತ ರೂಪಾಯಿ-ಡಾಲರ್ ದರವನ್ನು ಗಣನೆಗೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.