ADVERTISEMENT

6 ತಿಂಗಳ ಗರಿಷ್ಠ ಮಟ್ಟಕ್ಕೆ ಷೇರುಪೇಟೆ

ಪಿಟಿಐ
Published 24 ಆಗಸ್ಟ್ 2020, 17:08 IST
Last Updated 24 ಆಗಸ್ಟ್ 2020, 17:08 IST

ಮುಂಬೈ: ಬಂಡವಾಳ ಒಳಹರಿವು ಹಾಗು ಹಣಕಾಸು ವಲಯದ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಳದಿಂದಾಗಿ ದೇಶದ ಷೇರುಪೇಟೆಗಳ ವಹಿವಾಟು ಆರು ತಿಂಗಳ ಗರಿಷ್ಠ ಮಟ್ಟದಲ್ಲಿ ಅಂತ್ಯವಾಗಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ 52 ಪೈಸೆ ಹೆಚ್ಚಾಗಿರುವುದು ಸಹ ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 365 ಅಂಶ ಹೆಚ್ಚಾಗಿ 38,799 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 95 ಅಂಶ ಹೆಚ್ಚಾಗಿ 11,466 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ಫೆಬ್ರುವರಿ ಬಳಿಕ ಎರಡೂ ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ಗರಿಷ್ಠ ಗಳಿಕೆ: ದಿನದ ವಹಿವಾಟಿನಲ್ಲಿ ಕೋಟಕ್‌ ಬ್ಯಾಂಕ್‌ ಷೇರು ಶೇ 3.53ರಷ್ಟು ಹೆಚ್ಚಾಗಿದೆ. ಇಂಡಸ್‌ಇಂಡ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫಿನ್‌ಸರ್ವ್‌, ಎಸ್‌ಬಿಐ, ಮಾರುತಿ ಮತ್ತು ಎಚ್‌ಡಿಎಫ್‌ಸಿ ಷೇರುಗಳ ಮೌಲ್ಯವೂ ಹೆಚ್ಚಾಗಿದೆ.

ನಷ್ಟ: ಪವರ್ ಗ್ರಿಡ್‌, ಮಹೀಂದ್ರಾ, ಟೆಕ್‌ ಮಹೀಂದ್ರಾ, ಟೈಟಾನ್‌, ಎನ್‌ಟಿಪಿಸಿ, ಬಜಾಜ್‌ ಆಟೊ, ಎಚ್‌ಯುಎಲ್‌ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ ಕಂಪನಿಗಳ ಷೇರುಗಳು ಶೇ 2.06ರವರೆಗೂ ಇಳಿಕೆ ಕಂಡಿವೆ.

ರೂಪಾಯಿ: ಕರೆನ್ಸಿ ವಿನಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 52 ಪೈಸೆ ಹೆಚ್ಚಾಗಿ, ಒಂದು ಡಾಲರ್‌ಗೆ ₹ 74.32ರಂತೆ ವಿನಿಮಯಗೊಂಡಿತು. ಮಾರ್ಚ್‌ 18ರ ನಂತರದ ಗರಿಷ್ಠ ಮಟ್ಟ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.