ADVERTISEMENT

ಪೇಟಿಎಂ ಷೇರಿನ ಮೌಲ್ಯ ಏರಿಕೆ

ಪಿಟಿಐ
Published 15 ಮಾರ್ಚ್ 2024, 13:56 IST
Last Updated 15 ಮಾರ್ಚ್ 2024, 13:56 IST
ಪೇಟಿಎಂ
ಪೇಟಿಎಂ   

ನವದೆಹಲಿ/ಮುಂಬೈ: ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ನ ಷೇರಿನ ಮೌಲ್ಯ ಶೇ 5ರಷ್ಟು ಏರಿಕೆ ಆಗಿದೆ.

ಪೇಟಿಎಂ ಯುಪಿಐ ಸೇವೆಯನ್ನು ಒದಗಿಸಬಹುದು ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ಗೆ ಗುರುವಾರ ಅನುಮತಿ ನೀಡಿತ್ತು. ಇದರಿಂದ ಪೇಟಿಎಂ ಷೇರಿನ ಮೌಲ್ಯ ಶುಕ್ರವಾರ ಏರಿಕೆ ಆಗಿದೆ.

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 5ರಷ್ಟು ಹೆಚ್ಚಳವಾಗಿದೆ. ಷೇರಿನ ಬೆಲೆ ಕ್ರಮವಾಗಿ ₹370.90 ಮತ್ತು ₹370.70ಕ್ಕೆ ಮುಟ್ಟಿದೆ. 

ADVERTISEMENT

ಷೇರು ಸೂಚ್ಯಂಕಗಳು ಕುಸಿತ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಮತ್ತು ವಿದೇಶಿ ಬಂಡವಾಳ ಹೊರಹರಿವಿನಿಂದ ಷೇರು ಸೂಚ್ಯಂಕಗಳು ಶುಕ್ರವಾರ ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 453 ಇಳಿದು, 72,643ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 612 ಅಂಶ ಕುಸಿತ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 123 ಅಂಶ ಕಡಿಮೆಯಾಗಿ 22,023ಕ್ಕೆ ಅಂತ್ಯಗೊಂಡಿತು. 

ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಮೋಟರ್ಸ್‌, ಎನ್‌ಟಿಪಿಸಿ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಲಾರ್ಸೆನ್‌ ಆ್ಯಂಡ್‌ ಟೊಬ್ರೊ, ಇನ್ಫೊಸಿಸ್‌, ಟೆಕ್‌ ಮಹೀಂದ್ರ ಮತ್ತು ಎಸ್‌ಬಿಐ ಷೇರಿನ ಮೌಲ್ಯ ಕಂಡಿವೆ. ಭಾರ್ತಿ ಏರ್‌ಟೆಲ್‌, ಬಜಾಜ್‌ ಫೈನಾನ್ಸ್‌, ಬಜಾಜ್‌ ಫಿನ್‌ಸರ್ವ್‌, ಟಿಸಿಎಸ್‌ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ ಷೇರಿನ ಮೌಲ್ಯ ಏರಿಕೆಯಾಗಿವೆ. 

ಬಿಎಸ್‌ಇ ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 0.51 ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 0.25ರಷ್ಟು ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.