ADVERTISEMENT

ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾ: ಇಂಧನ ಸೂಚಕದಲ್ಲಿ ಲೋಪ

ಪಿಟಿಐ
Published 16 ನವೆಂಬರ್ 2025, 0:07 IST
Last Updated 16 ನವೆಂಬರ್ 2025, 0:07 IST
ಮಾರುತಿ ಸುಜುಕಿ
ಮಾರುತಿ ಸುಜುಕಿ   

ನವದೆಹಲಿ: ಮಾರುತಿ ಸುಜುಕಿ ಕಂಪನಿಯು ಗ್ರ್ಯಾಂಡ್‌ ವಿಟಾರಾ ಮಾದರಿಯ ಒಟ್ಟು 39,506 ವಾಹನಗಳಲ್ಲಿನ ಇಂಧನ ಮಟ್ಟ ಸೂಚಕ ವ್ಯವಸ್ಥೆಯನ್ನು ಸರಿಪಡಿಸಿಕೊಡಲು ಮುಂದಾಗಿದೆ.

ಇಷ್ಟು ಸಂಖ್ಯೆಯ ವಾಹನಗಳನ್ನು ಕಂಪನಿಯು ಹಿಂದಕ್ಕೆ ಪಡೆದು, ಇಂಧನ ಮಟ್ಟ ಸೂಚಕವನ್ನು ಹೊಸದಾಗಿ ಅಳವಡಿಸಿಕೊಡಲಿದೆ.

2024ರ ಡಿಸೆಂಬರ್‌ 9ರಿಂದ 2025ರ ಏಪ್ರಿಲ್‌ 29ರವರೆಗೆ ತಯಾರಾದ ವಾಹನಗಳನ್ನು ತರಿಸಿಕೊಂಡು, ಪರಿಶೀಲಿಸಲಾಗುತ್ತದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಈ ವಾಹನಗಳ ಪೈಕಿ ಕೆಲವು ವಾಹನಗಳಲ್ಲಿ ಇಂಧನ ಮಟ್ಟದ ಸೂಚಕವು ಸರಿಯಾಗಿ ಕೆಲಸ ಮಾಡುತ್ತಿಲ್ಲದಿರಬಹುದು ಎಂದು ಕಂಪನಿ ಹೇಳಿದೆ. ಸಂಬಂಧಪಟ್ಟ ವಾಹನ ಮಾಲೀಕರಿಗೆ ಮಾರುತಿ ಸುಜುಕಿ ಡೀಲರ್‌ಗಳಿಂದ ಸಂದೇಶ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.