ADVERTISEMENT

ಹರಿಯಾಣದಲ್ಲಿ ಮಾರುತಿಯ ಹೊಸ ಘಟಕ: ₹ 18 ಸಾವಿರ ಕೋಟಿ ಹೂಡಿಕೆ

ಪಿಟಿಐ
Published 14 ಜುಲೈ 2021, 11:28 IST
Last Updated 14 ಜುಲೈ 2021, 11:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಹರಿಯಾಣದಲ್ಲಿ ಹೊಸ ತಯಾರಿಕಾ ಘಟಕ ಸ್ಥಾಪನೆಗಾಗಿ ₹ 18 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ಕಂಪನಿಯ ಅಧ್ಯಕ್ಷ ಆರ್‌.ಸಿ. ಭಾರ್ಗವ ಹೇಳಿದ್ದಾರೆ.

ಗುರುಗ್ರಾಮದಲ್ಲಿ ಇರುವ ತಯಾರಿಕಾ ಘಟಕಕ್ಕೆ ಬದಲಾಗಿ ಈ ಹೊಸ ಘಟಕ ಸ್ಥಾಪನೆ ಆಗಲಿದ್ದು, ಇದರ ವಾರ್ಷಿಕ ವಾಹನ ತಯಾರಿಕಾ ಸಾಮರ್ಥ್ಯ 7.5 ಲಕ್ಷದಿಂದ 10 ಲಕ್ಷದವರೆಗೆ ಇರುವ ನಿರೀಕ್ಷೆ ಮಾಡಲಾಗಿದೆ.

ತಯಾರಿಕಾ ಘಟಕಕ್ಕೆ ಯಾವ ಜಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ. ಗುರುಗ್ರಾಮ ಘಟಕವನ್ನು ಸ್ಥಳಾಂತರಿಸುವ ಕುರಿತು ಬಹಳ ಹಿಂದೆಯೇ ನಿರ್ಧಾರ ಕೈಗೊಳ್ಳಲಾಗಿತ್ತು. ಹರಿಯಾಣದಲ್ಲಿ ಹೊಸ ಘಟಕ ಇರಲಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಗುರುಗ್ರಾಮ ಘಟಕವು 300 ಎಕರೆ ಪ್ರದೇಶದಲ್ಲಿ ವಿಸ್ತರಿಸಿದ್ದು, ವಸತಿ ಪ್ರದೇಶದ ನಡುವೆ ಇದೆ. ಹೀಗಾಗಿ ಜನ ದಟ್ಟಣೆ ಮತ್ತು ವಾಹನ ಸಂಚಾರ ಸಮಸ್ಯೆಯ ಕಾರಣಗಳಿಂದಾಗಿ ಘಟಕವನ್ನು ಸ್ಥಳಾಂತರಿಸಲು ಕಂಪನಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.