ADVERTISEMENT

ಮೊದಲ ಬಾರಿ ಕಾರು ಖರೀದಿಸುವವರಲ್ಲಿ ಹೆಚ್ಚಳ: ಮಾರುತಿ ಸುಜುಕಿ ಇಂಡಿಯಾ

ಪಿಟಿಐ
Published 2 ಆಗಸ್ಟ್ 2020, 21:31 IST
Last Updated 2 ಆಗಸ್ಟ್ 2020, 21:31 IST
ಮಾರುತಿ ಸುಜುಕಿ ಸ್ವಿಫ್ಟ್ ಕಾರು
ಮಾರುತಿ ಸುಜುಕಿ ಸ್ವಿಫ್ಟ್ ಕಾರು   

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಮೊದಲ ಬಾರಿಗೆ ಕಾರು ಖರೀದಿಸುತ್ತಿರುವವರ ಹಾಗೂ ಹೆಚ್ಚುವರಿ ಕಾರು ಖರೀದಿಸುತ್ತಿರುವವರ ಪ್ರಮಾಣ ಹೆಚ್ಚಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಹೇಳಿದೆ. ಸಮೂಹ ಸಾರಿಗೆಗಿಂತಲೂ ಜನ ಖಾಸಗಿ ವಾಹನಗಳಿಗೆ ಆದ್ಯತೆ ನೀಡುತ್ತಿರುವುದು ಇದಕ್ಕೆ ಒಂದು ಕಾರಣ.

‘ಕಾರುಗಳ ಮಾರಾಟವು ಜುಲೈನಲ್ಲಿ ಸುಧಾರಿಸಿದೆ. ಹಬ್ಬಗಳ ಸಂದರ್ಭದಲ್ಲಿ ಮಾರಾಟ ಹೇಗಿರುತ್ತದೆ ಎನ್ನುವುದನ್ನು ಆರೋಗ್ಯ ಬಿಕ್ಕಟ್ಟು ಯಾವ ಮಟ್ಟದಲ್ಲಿ ಇರುತ್ತದೆ ಎಂಬುದು ತೀರ್ಮಾನಿಸುತ್ತದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇ ಶಕ ಶಶಾಂಕ್ ಶ್ರೀವಾಸ್ತವ ಹೇಳಿದರು.

‘ಇದೇ ಮೊದಲ ಬಾರಿಗೆ ಕಾರು ಖರೀದಿಸುತ್ತಿರುವವರ ಪ್ರಮಾಣ ಹೆಚ್ಚಾಗಿದೆ. ಇರುವ ಕಾರನ್ನು ಮಾರಾಟ ಮಾಡಿ ಹೊಸ ಕಾರು ಖರೀದಿಸುವವರ ಪ್ರಮಾಣ ಕಡಿಮೆ ಇದೆ. ಆದರೆ, ಇರುವ ಕಾರಿನ ಜೊತೆಯಲ್ಲೇ ಇನ್ನೊಂದು ಕಾರು ಖರೀದಿಸುವ ಸಂಖ್ಯೆ ಹೆಚ್ಚಾಗಿದೆ’ ಎಂದು ಅವರು ಹೇಳಿದರು.

ADVERTISEMENT

ಜುಲೈನಲ್ಲಿ ಆಗಿರುವ ಕಾರುಗಳ ಮಾರಾಟವು ಆಶಾಭಾವನೆಯನ್ನೂ ಸಮಾಧಾನವನ್ನೂ ತಂದಿದೆ. ಆದರೆ, ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಹೇಗಿರಲಿವೆ ಎಂಬುದನ್ನು ಆಧರಿಸಿ ದೀರ್ಘಾವಧಿ ಬೇಡಿಕೆ ಇರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.