ADVERTISEMENT

2.5 ಕೋಟಿ ತಯಾರಿಕೆಯ ಮೈಲಿಗಲ್ಲು ದಾಟಿದ ಮಾರುತಿ ಸುಜುಕಿ ಇಂಡಿಯಾ

ಪಿಟಿಐ
Published 2 ನವೆಂಬರ್ 2022, 16:20 IST
Last Updated 2 ನವೆಂಬರ್ 2022, 16:20 IST
ಮಾರುತಿ ಸುಜುಕಿ ಇಂಡಿಯಾ (ಸಾಂದರ್ಭಿಕ ಚಿತ್ರ)
ಮಾರುತಿ ಸುಜುಕಿ ಇಂಡಿಯಾ (ಸಾಂದರ್ಭಿಕ ಚಿತ್ರ)   

ನವದೆಹಲಿ: ವಾಹನ ತಯಾರಿಕೆಯಲ್ಲಿ 2.5 ಕೋಟಿಯ ಮೈಲಿಗಲ್ಲು ದಾಟಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಬುಧವಾರ ತಿಳಿಸಿದೆ.

ಕಂಪನಿಯು 1983ರ ಡಿಸೆಂಬರ್‌ನಲ್ಲಿ ತಯಾರಿಕೆ ಆರಂಭಿಸಿತು. 1994ರ ಮಾರ್ಚ್‌ನಲ್ಲಿ ತಯಾರಿಕೆಯು 10 ಲಕ್ಷದ ಗಡಿ ದಾಟಿತು. 2011ರ ಮಾರ್ಚ್‌ನಲ್ಲಿ 1 ಕೋಟಿ ಮತ್ತು 2018ರ ಜುಲೈನಲ್ಲಿ 2 ಕೋಟಿಯ ಮೈಲಿಗಲ್ಲನ್ನು ಕಂಪನಿ ದಾಟಿದೆ.

ಕಂಪನಿಯು ಸದ್ಯ ಹರಿಯಾಣದ ಗುರುಗ್ರಾಮ ಮತ್ತು ಮಾನೇಸರ್‌ನಲ್ಲಿ ಒಟ್ಟು ಎರಡು ಘಟಕಗಳನ್ನು ಹೊಂದಿದೆ. ಒಟ್ಟು ವಾರ್ಷಿಕ ತಯಾರಿಕಾ ಸಾಮರ್ಥ್ಯ 15 ಲಕ್ಷ ಇದೆ.

ADVERTISEMENT

ಕಂಪನಿಯು ದೇಶದಲ್ಲಿ 16 ಪ್ರಯಾಣಿಕ ವಾಹನ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 100ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತಿದೆ.

ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯೊಂದಿಗೆ ಹರಿಯಾಣದ ಖಾರ್ಖೋಡಾದಲ್ಲಿ ಹೊಸ ತಯಾರಿಕಾ ಘಟಕ ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಿಸಾಶಿ ಟಕೆಯುಚಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.