ADVERTISEMENT

ಮಾರುತಿ ಸುಜುಕಿ ಲಾಭ ಎರಡು ಪಟ್ಟು ಏರಿಕೆ

ಪಿಟಿಐ
Published 24 ಜನವರಿ 2023, 14:37 IST
Last Updated 24 ಜನವರಿ 2023, 14:37 IST
   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಡಿಸೆಂಬರ್ ತ್ರೈಮಾಸಿಕದ ನಿವ್ವಳ ಲಾಭವು ₹ 2,351 ಕೋಟಿಗೆ ಏರಿಕೆ ಆಗಿದೆ. ವಾಹನ ಮಾರಾಟ ಸುಧಾರಿಸಿದ್ದು ಲಾಭ ಹೆಚ್ಚಾಗುವುದಕ್ಕೆ ಒಂದು ಮುಖ್ಯ ಕಾರಣ.

ಹಿಂದಿನ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 1,011 ಕೋಟಿ ನಿವ್ವಳ ಲಾಭ ಗಳಿಸಿತ್ತು. ಈ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಮಾರಾಟದ ಮೂಲಕ ₹ 27,849 ಕೋಟಿ ವರಮಾನ ಗಳಿಸಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 4.65 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಇದರಲ್ಲಿ 61 ಸಾವಿರ ವಾಹನಗಳನ್ನು ರಫ್ತು ಮಾಡಲಾಗಿದೆ.

ADVERTISEMENT

ಗ್ರ್ಯಾಂಡ್‌ ವಿಟಾರಾ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಹಾಗೂ ಬ್ರೆಜಾ ಮಾದರಿಯ ಹೊಸ ಅವತರಣಿಕೆಯನ್ನು ಬಿಡುಗಡೆ ಮಾಡಿದ್ದು ಕಂಪನಿಗೆ ಮಾರುಕಟ್ಟೆ ಪಾಲನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿ ನೆರವಿಗೆ ಬಂದಿದೆ ಎಂದು ಕಂಪನಿಯು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ವಿವರಿಸಿದೆ.

ವೆಚ್ಚ ತಗ್ಗಿಸಲು ಮಾಡಿದ ಯತ್ನಗಳು, ಕಚ್ಚಾ ವಸ್ತುಗಳ ಬೆಲೆಯಲ್ಲಿ ಆದ ಇಳಿಕೆ ಕೂಡ ಲಾಭದ ಪ್ರಮಾಣ ಹೆಚ್ಚಾಗಲು ನೆರವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.