ADVERTISEMENT

ಜನವರಿಯಿಂದ ಮಾರುತಿ ಕಾರು ಬೆಲೆ ಏರಿಕೆ

ಪಿಟಿಐ
Published 2 ಡಿಸೆಂಬರ್ 2022, 14:04 IST
Last Updated 2 ಡಿಸೆಂಬರ್ 2022, 14:04 IST
ಮಾರುತಿ ಸುಜುಕಿ ಇಂಡಿಯಾ
ಮಾರುತಿ ಸುಜುಕಿ ಇಂಡಿಯಾ   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಜನವರಿಯಿಂದ ತನ್ನ ಕಾರುಗಳ ಬೆಲೆಯನ್ನು ‘ಗಮನಾರ್ಹವಾಗಿ’ ಹೆಚ್ಚಳ ಮಾಡಲಿದೆ. ತಯಾರಿಕಾ ವೆಚ್ಚದಲ್ಲಿ ಏರಿಕೆ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ 2023ರ ಏಪ್ರಿಲ್‌ನಿಂದ ಜಾರಿಗೆ ಬರಲಿರುವ ಕಠಿಣ ನಿಯಮಗಳ ಪಾಲನೆಗೆ ಸಜ್ಜಾಗಬೇಕಿರುವುದು ಬೆಲೆ ಏರಿಕೆ ತೀರ್ಮಾನಕ್ಕೆ ಕಾರಣ.

ತಯಾರಿಕಾ ವೆಚ್ಚ ಹೆಚ್ಚಾಗಿರುವ ಕಾರಣ, ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆಯನ್ನು ವರ್ಗಾವಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಕಂಪನಿಯು ತಿಳಿಸಿದೆ. ಬೆಲೆ ಏರಿಕೆ ಪ್ರಮಾಣದಲ್ಲಿ ಮಾದರಿಯಿಂದ ಮಾದರಿಗೆ ವ್ಯತ್ಯಾಸ ಇರಲಿದೆ. ಆದರೆ ಬೆಲೆ ಹೆಚ್ಚಳ ಎಷ್ಟು ಎಂಬುದನ್ನು ಕಂಪನಿ ತಿಳಿಸಿಲ್ಲ.

ಕಾರು ತಯಾರಿಕೆಗೆ ಅಗತ್ಯವಿರುವ ಸರಕುಗಳ ಬೆಲೆಯು ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಈಗ ದುಬಾರಿಯಾಗಿದೆ ಎಂದು ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಕಂಪನಿಯು ಏಪ್ರಿಲ್‌ನಲ್ಲಿ ವಾಹನಗಳ ಬೆಲೆಯನ್ನು ಶೇ 1.3ರಷ್ಟು ಹೆಚ್ಚಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.