ನವದೆಹಲಿ: ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಜಿಎಸ್‌ಟಿ ಪರಿಷ್ಕರಣೆಯಿಂದಾಗಿ ತನ್ನ ವಾಹನಗಳ ಬೆಲೆ ಎಷ್ಟರಮಟ್ಟಿಗೆ ಇಳಿಕೆ ಆಗುತ್ತದೆ ಎನ್ನುವುದನ್ನು ಪ್ರಕಟಿಸಿದೆ.
ಜಿಎಸ್‌ಟಿ ಪರಿಷ್ಕರಣೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿ ಮುಂದಾಗಿದೆ. ವಾಹನಗಳ ಬೆಲೆ ₹46,400ರಿಂದ ₹1.29 ಲಕ್ಷದವರೆಗೆ ಇಳಿಕೆ ಆಗಲಿದೆ. ಪರಿಷ್ಕೃತ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಗುರುವಾರ ಷೇರುಪೇಟೆಗೆ ತಿಳಿಸಿದೆ.
ಕಂಪನಿಯ ಎಸ್–ಪ್ರೆಸ್ಸೊ ವಾಹನದ ಬೆಲೆ ₹1,29,600ವರೆಗೆ ಕಡಿಮೆ ಆಗಲಿದೆ. ಆಲ್ಟೋ ಕೆ10 ₹1,07,600, ಸೆಲೆರಿಯೊ ₹94,100, ವ್ಯಾಗನ್–ಆರ್ ₹79,600 ಮತ್ತು ಇಗ್ನಿಸ್ ದರ ₹71,300ವರೆಗೆ ತಗ್ಗಲಿದೆ.
ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಬೆಲೆ ₹84,600, ಬಲೆನೊ ₹86,100, ಟೂರ್ ಎಸ್ ₹67,200, ಡಿಜೈರ್ ₹87,700, ಫ್ರಾಂಕ್ಸ್ ₹1,12,600, ಬ್ರೆಜಾ ₹1,12,700, ಗ್ರ್ಯಾಂಡ್ ವಿಟಾರಾ ₹1.07 ಲಕ್ಷ, ಜಿಮ್ನಿ ₹51,900, ಎರ್ಟಿಗಾ ₹46,400 ಮತ್ತು ಎಕ್ಸ್‌ಎಲ್6 ₹52 ಸಾವಿರದವರೆಗೆ ಕಡಿಮೆ ಆಗಲಿದೆ.
ಇನ್ವಿಕ್ಟೊ ₹61,700, ಇಕೊ ₹68 ಸಾವಿರದವರೆಗೆ ಮತ್ತು ಸೂಪರ್ ಕ್ಯಾರಿ ಎಲ್‌ಸಿವಿ ₹52,100ವರೆಗೆ ತಗ್ಗಲಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.