ADVERTISEMENT

ಬ್ರೋಕರೇಜ್ ಮಾತು: ಮ್ಯಾಕ್ಸ್‌ ಹೆಲ್ತ್‌ಕೇರ್ ಷೇರಿನ ಬೆಲೆ ಹೆಚ್ಚಳ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 23:30 IST
Last Updated 19 ನವೆಂಬರ್ 2025, 23:30 IST
   

ಆರೋಗ್ಯ ಸೇವಾ ವಲಯದ ಮ್ಯಾಕ್ಸ್‌ ಹೆಲ್ತ್‌ಕೇರ್ ಕಂಪನಿಯ ಷೇರಿನ ಬೆಲೆ ₹1,360 ಆಗಲಿದೆ ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್‌ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟಾರೆ ಕಾರ್ಯಾಚರಣೆ ಸದೃಢವಾಗಿದ್ದು, ವರಮಾನದಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ. ಮುಂದಿನ ನಾಲ್ಕರಿಂದ ಐದು ವರ್ಷದಲ್ಲಿ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯವನ್ನು ದುಪ್ಟಟ್ಟು ಮಾಡುವ ಗುರಿ ಹೊಂದಿದೆ. 2024-25ರಿಂದ 2027–28ರವರೆಗೆ ಕಂಪನಿಯ ವರಮಾನದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್‌) ಶೇ 14ರಷ್ಟಾಗುವ ನಿರೀಕ್ಷೆ ಇದೆ ಎಂದು ಹೇಳಿದೆ. 

ಬುಧವಾರದ ವಹಿವಾಟಿನ ಅಂತ್ಯಕ್ಕೆ ಮ್ಯಾಕ್ಸ್‌ ಹೆಲ್ತ್‌ಕೇರ್ ಕಂಪನಿಯ ಷೇರಿನ ಬೆಲೆ ₹1,164.70 ಇತ್ತು. 

ADVERTISEMENT

(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.