ADVERTISEMENT

‘ಆಮ್ಲಜನಕ ಸಾಗಣೆಯೇ ಸಮಸ್ಯೆ’

ಪಿಟಿಐ
Published 22 ಏಪ್ರಿಲ್ 2021, 16:11 IST
Last Updated 22 ಏಪ್ರಿಲ್ 2021, 16:11 IST

ನವದೆಹಲಿ: ಉಕ್ಕು ತಯಾರಿಕಾ ಘಟಕಗಳಿಂದ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಸಾಗಿಸುವಲ್ಲಿ ಸಮಸ್ಯೆಗಳು ಇವೆ ಎಂದು ಟಾಟಾ ಸ್ಟೀಲ್ ಮತ್ತು ಜೆಎಸ್‌ಪಿಎಲ್‌ ಕಂಪನಿಗಳು ಹೇಳಿವೆ.

ದ್ರವೀಕೃತ ವೈದ್ಯಕೀಯ ಆಮ್ಲಜನಕದ (ಎಲ್‌ಎಂಒ) ಪೂರೈಕೆಯನ್ನು ಹೆಚ್ಚಿಸಲು ತಾನು ಕೂಡ ಪ್ರಯತ್ನ ಮಾಡುತ್ತಿರುವುದಾಗಿ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಇಸ್ಪಟ್ ನಿಗಮ ತಿಳಿಸಿದೆ.

‘ನಾವು ಬೇರೆ ಬೇರೆ ರಾಜ್ಯಗಳಿಗೆ ಪ್ರತಿದಿನ 300 ಟನ್ ಎಲ್‌ಎಂಒ ಪೂರೈಸುತ್ತಿದ್ದೇವೆ. ಕಂಟೇನರ್‌ಗಳ ಕೊರತೆ ಹಾಗೂ ಸಾಗಾಟದಲ್ಲಿ ಸಮಸ್ಯೆ ಇದ್ದರೂ ಉತ್ಪಾದನೆ ಹೆಚ್ಚಿಸಲು ನಾವು ಸಿದ್ಧರಿದ್ದೇವೆ’ ಎಂದು ಟಾಟಾ ಸ್ಟೀಲ್‌ನ ವಕ್ತಾರರೊಬ್ಬರು ತಿಳಿಸಿದರು. ಎಲ್‌ಎಂಒ ಸಾಗಾಟ ದೊಡ್ಡ ಸಮಸ್ಯೆಯಾಗಿದೆ ಎಂದು ಜೆಎಸ್‌ಪಿಎಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿ.ಆರ್. ಶರ್ಮ ಹೇಳಿದ್ದಾರೆ.

ADVERTISEMENT

‘ನಮ್ಮ ಬಳಿ 500 ಟನ್‌ಗಿಂತ ಹೆಚ್ಚು ಎಲ್‌ಎಂಒ ಇದೆ. ಅದನ್ನು ನಾವು ಕಳುಹಿಸಿಕೊಡಲಿದ್ದೇವೆ’ ಎಂದು ಶರ್ಮ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.