ADVERTISEMENT

ಜಿಡಿಪಿ ಅಂದಾಜು ತಗ್ಗಿಸಿದ ಮೂಡೀಸ್‌

ಪಿಟಿಐ
Published 17 ಫೆಬ್ರುವರಿ 2020, 22:58 IST
Last Updated 17 ಫೆಬ್ರುವರಿ 2020, 22:58 IST
   

ನವದೆಹಲಿ: ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌ ಕಂಪನಿಯು, ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು 2019–20ನೇ ಹಣಕಾಸು ವರ್ಷಕ್ಕೆ ಶೇ 6.6 ರಿಂದ ಶೇ 5.4ಕ್ಕೆ ತಗ್ಗಿಸಿದೆ.

ದೇಶದ ಆರ್ಥಿಕತೆಯು ಈ ಹಿಂದಿಗಿಂತಲೂ ಬಹಳ ನಿಧಾನವಾಗಿ ಚೇತರಿಕೆ ಕಂಡುಕೊಳ್ಳುತ್ತಿದೆ. ಹೀಗಾಗಿ ಜಿಡಿಪಿ ಅಂದಾಜನ್ನು ಪರಿಷ್ಕರಿಸಲಾಗಿದೆ. 2019–20ರಲ್ಲಿ ಶೇ 5.4ರಷ್ಟು ಹಾಗೂ 2020–21ರಲ್ಲಿ ಶೇ 5.8ರಷ್ಟು ಬೆಳವಣಿಗೆ ಕಾಣಲಿದೆ ಎಂದು ತಿಳಿಸಿದೆ.

ಎರಡು ವರ್ಷಗಳಿಂದ ಭಾರತದ ಆರ್ಥಿಕತೆಯು ಇಳಿಮುಖ ಪ್ರಗತಿಯಲ್ಲಿ ಸಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಚೇತರಿಸಿಕೊಳ್ಳಲು ಆರಂಭಿಸಿದೆ ಎಂದು ಹೇಳಿದೆ.

ADVERTISEMENT

ಜಾಗತಿಕ ಆರ್ಥಿಕತೆಗೆ ಕೋವಿಡ್‌ ಸೋಂಕು
ಕೋವಿಡ್‌ ವೈರಸ್‌ನಿಂದಾಗಿ ಜಾಗತಿಕ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಇರಲಿದೆ. ಜಿ–20 ದೇಶಗಳ ಜಿಡಿಪಿ ಬೆಳವಣಿಗೆ 2019–20ರಲ್ಲಿ ಶೇ 2.4ರಷ್ಟಿರಲಿದೆ. 2020–21ರಲ್ಲಿ ಶೇ 2.8ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದೆ.

ಚೀನಾದ ಆರ್ಥಿಕ ಬೆಳವಣಿಗೆ ದರವನ್ನು ಶೇ 5.7ರಿಂದ ಶೇ 5.2ಕ್ಕೆ ತಗ್ಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.