ADVERTISEMENT

ಹಬ್ಬದ ಸಂದರ್ಭ ಅಮೆಜಾನ್‌ ಫ್ಯಾಶನ್‌ನತ್ತ ಹೆಚ್ಚಿನ ಜನರು ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 4:48 IST
Last Updated 12 ನವೆಂಬರ್ 2020, 4:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಈ ಬಾರಿಯ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಜನರು ಅಮೆಜಾನ್ ಫ್ಯಾಶನ್‌ನತ್ತ ಆಕರ್ಷಿತಗೊಂಡಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆನಂದಿಸಿದ್ದಾರೆ.

ಹೆಚ್ಚು ಹೆಚ್ಚು ಗ್ರಾಹಕರು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದು, ಅಮೆಜಾನ್‌ನಿಂದ ಹೆಚ್ಚಿನ ಅಗತ್ಯತೆಗಳನ್ನು ಪೂರೈಸಿಕೊಂಡಿದ್ದಾರೆ. ಇದಕ್ಕಾಗಿಯೇ ಅಮೆಜಾನ್ ಫ್ಯಾಶನ್‌ನಲ್ಲಿ 6,200ಕ್ಕಿಂತ ಹೆಚ್ಚಿನ ಬ್ರಾಂಡ್‌ಗಳನ್ನು ಲಾಂಚ್ ಮಾಡಲಾಗಿತ್ತು. ಕೋವಿಡ್-19 ಕಾಲದಲ್ಲಿ ಗ್ರಾಹಕರು ಇ-ಕಾಮರ್ಸ್‌ನ ಮೊರೆ ಹೋಗಿದ್ದರು. ಇತ್ತ ಮಾರಾಟಗಾರು ಕೂಡಾ ಇ-ಕಾಮರ್ಸ್‌ ಅನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಸ್ಟೀವ್ ಫ್ಯಾಶನ್ ವೈಶಿಷ್ಟ್ಯತೆಗಳು

ADVERTISEMENT

ಮೆಟ್ರೋ ನಗರಗಳಿಂದ ಹೊರಗೆ (NCR ಸೇರಿದಂತೆ), ಲಖನೌ, ಕೊಯಮತ್ತೂರು, ಪಟ್ನಾ ಮತ್ತು ವಿಶಾಖಪಟ್ಟಣಂನಲ್ಲಿ ಮಹಿಳೆಯರ ಎಥ್ನಿಕ್ ವೇರ್‌ಗಳ ಮೇಲೆ ಹೆಚ್ಚಿನ ಬೇಡಿಕೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪುರುಷರ ಎಥ್ನಿಕ್ ವೇರ್‌ಗಳಲ್ಲೂ ಕೂಡಾ ಎರಡುಪಟ್ಟು ಬೇಡಿಕೆ ಹೆಚ್ಚಾಗಿದೆ. ಮೆಟರ್ನಿಟಿ ವೇರ್‌ಗಳಿಗೆ ಶೇ 50ಕ್ಕಿಂತಲೂ ಹೆಚ್ಚು ಬೇಡಿಕೆ ದಕ್ಷಿಣ ಭಾರತದಿಂದ ಬಂದಿದ್ದವು. ಅಲ್ಲದೆ ಮಕ್ಕಳ ಉಡುಗೆಗಳಿಗಾಗಿ ಇತರ ಪ್ರಾಂತ್ಯಕ್ಕಿಂತ ದಕ್ಷಿಣ ಭಾರತದಲ್ಲಿ ಎರಡುಪಟ್ಟು ಹೆಚ್ಚಿನ ಬೇಡಿಕೆ ಉಂಟಾಗಿದೆ.

ಟ್ರ್ಯಾವೆಲ್ ಲಗ್ಗೇಜ್,ಫೂಟ್‌ವೇರ್, ಸ್ಪೋರ್ಟ್ಸ್‌ವೇರ್ ಮತ್ತು ಗೃಹಾಂಲಂಕಾರ ಮತ್ತು ಉಪಯೋಗಿ ವಸ್ತುಗಳು ಸೇರಿದಂತೆ ವರ್ಕ್ ಫ್ರಮ್ ಹೋಮ್ ಅಗತ್ಯತೆಗಳು ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಮಾರಾಟವಾಗಿದ್ದವು. ಉತ್ತರಭಾರತದಿಂದ ಸ್ಪೋರ್ಟ್ಸ್‌ವೇರ್‌ಗಳಿಗೆ ಅತಿ ಹೆಚ್ಚು ಬೇಡಿಕೆಗಳು ಬಂದಿದ್ದವು. ಪ್ರೀಮಿಯರ್ ಫ್ಯಾಶನ್ ಬ್ರಾಂಡ್‌ಗಳಿಗೆ ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಬೇಡಿಕೆ ಬಂದಿದ್ದವು. ಜ್ಯುವೆಲ್ಲರಿ, ಫ್ಯಾಶನ್ ಜ್ಯುವೆಲ್ಲರಿಗಳಿಗೂ ಕಳೆದ ವರ್ಷಕ್ಕಿಂತ ಬೇಡಿಕೆ ಹೆಚ್ಚಾಗಿತ್ತು.

ಮಾರಾಟಗಾರಿಗೂ ಯಶಸ್ಸು

6,50,000 ಮಾರಾಟಗಾರರಿದ್ದು, ಅವರಲ್ಲಿ ಹೆಚ್ಚಿನವರು ಸಣ್ಣ-ಪುಟ್ಟ ಉದ್ಯಮಿಗಳು, ಮಹಿಳಾ ಮಾರಾಟಗಾರರು, ಕರ-ಕುಶಲಗಾರರು, ನೇಕಾರರು ಮತ್ತು ಕಲಾವಿದರಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿಭಾರತದಾದ್ಯಂತ 528 ಸಾವಿರ ಹೊಸ ಫ್ಯಾಶನ್ ಮಾರಾಟಗಾರರು ಸೇರಿಕೊಂಡಿದ್ದಾರೆ. ಭಾರತದಾದ್ಯಂತ ಜಮ್ಮು ಮತ್ತು ಕಾಶ್ಮೀರ, ಲೇಹ್, ಕನ್ಯಾಕುಮಾರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತ್ರಿಪುರ, ಸಿಕ್ಕಿಂ ಹಾಗೂ ದಮನ್ ಮತ್ತು ದಿಯುಗಳಿಂದ ಆರ್ಡರ್‌ಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.