ಭೂಪಾಲ್: ‘ಮಧ್ಯಪ್ರದೇಶದ ವಿವಿಧ ಯೋಜನೆಗಳಲ್ಲಿ ₹2.1 ಲಕ್ಷ ಕೋಟಿ ಮೊತ್ತದ ಬಂಡವಾಳವನ್ನು ಹೂಡಿಕೆ ಮಾಡಲಾಗುವುದು’ ಎಂದು ಅದಾನಿ ಸಮೂಹ ಘೋಷಿಸಿದೆ.
ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸೋಮವಾರ ಮಾತನಾಡಿದ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ಪಂಪ್ಡ್ ಸ್ಟೋರೇಜ್, ಸಿಮೆಂಟ್, ಗಣಿಗಾರಿಕೆ, ಥರ್ಮಲ್ ವಿದ್ಯುತ್ ಯೋಜನೆಗಳಲ್ಲಿ ₹1.10 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು. ಸ್ಮಾರ್ಟ್‌ಸಿಟಿ, ವಿಮಾನ ನಿಲ್ದಾಣದ ಯೋಜನೆಯಲ್ಲಿ ₹1 ಲಕ್ಷ ಕೋಟಿ ಹೂಡಿಕೆ ಮಾಡಲಾಗುವುದು. ಇದು 2030ರ ವೇಳೆಗೆ 1.20 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
ಇಂಧನ, ಮೂಲಸೌಕರ್ಯ, ತಯಾರಿಕಾ, ಸರಕು, ಕೃಷಿ ವಲಯದಲ್ಲಿ ₹50 ಸಾವಿರ ಕೋಟಿಯನ್ನು ಈಗಾಗಲೇ ಹೂಡಿಕೆ ಮಾಡಲಾಗಿದೆ. ಇದು 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ ಎಂದರು.
ಈ ಯೋಜನೆಗಳು ಕೇವಲ ಹೂಡಿಕೆಗಳ ಬಗ್ಗೆ ಅಲ್ಲ, ಬದಲಾಗಿ ರಾಜ್ಯವನ್ನು ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ರಾಷ್ಟ್ರೀಯ ನಾಯಕನನ್ನಾಗಿ ಮಾಡುವ ಮಹತ್ವದ ಮೈಲುಗಲ್ಲುಗಳಾಗಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.