ADVERTISEMENT

ಚೆನೈ–ಮ್ಯಾನ್ಮಾರ್‌ ನಡುವೆ ಪ್ರತಿದಿನ ನೇರ ವಿಮಾನ ಸೇವೆ– ಇಲ್ಲಿದೆ ವಿವರ

ಮ್ಯಾನ್ಮಾರ್‌ ಏರ್‌ವೇಸ್ ಇಂಟರನ್ಯಾಷನಲ್ ಕಂಪನಿಯಿಂದ ಹೊಸ ಸೇವೆ

ಪಿಟಿಐ
Published 7 ಮೇ 2023, 13:08 IST
Last Updated 7 ಮೇ 2023, 13:08 IST
 Embraer E190LR
Embraer E190LR   

ಚೆನ್ನೈ: ಚೆನ್ನೈ ಹಾಗೂ ಮ್ಯಾನ್ಮಾರ್‌ ದೇಶದ ರಾಜಧಾನಿ ಯಾಂಗೂನ್‌ನ ನಡುವೆ ನೇರ ವಿಮಾನಯಾನ ಸೌಲಭ್ಯವನ್ನು ಕಲ್ಪಿಸಲು ಖಾಸಗಿ ವಿಮಾನಯಾನ ಸಂಸ್ಥೆಯಾದ ಮ್ಯಾನ್ಮಾರ್‌ ಏರ್‌ವೇಸ್ ಇಂಟರನ್ಯಾಷನಲ್ (MAI) ಮುಂದಾಗಿದೆ.

ಕಂಪನಿ ಭಾನುವಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದೆ.

ಶನಿವಾರದಿಂದಲೇ ಈ ಸೇವೆ ಪ್ರಾರಂಭವಾಗಿದ್ದು Embraer E190LR ವಿಮಾನ ಯಾಂಗೂನ್‌ನಿಂದ ಚೆನೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ವೇಳೆ ವಿಮಾನಕ್ಕೆ ಭವ್ಯ ಸ್ವಾಗತ ಕೋರಲಾಯಿತು.

ADVERTISEMENT

ಇದಕ್ಕೂ ಮುನ್ನ ಯಾಂಗೂನ್‌ನಿಂದ ದೆಹಲಿ, ಕೋಲ್ಕತ್ತ ಹಾಗೂ ಗಯಾಕ್ಕೆ ನೇರ ವಿಮಾನ ಸಂಪರ್ಕವನ್ನು ಈ ಕಂಪನಿ ಕಲ್ಪಿಸಿದೆ.

ಪ್ರತಿದಿನ ಯಾಂಗೂನ್‌ನಿಂದ ಬೆಳಿಗ್ಗೆ 8 ಕ್ಕೆ ಹೊರಡುವ ಈ ವಿಮಾನ ಬೆಳಿಗ್ಗೆ 10.15 ಕ್ಕೆ ಚೆನ್ನೈ ತಲುಪಲಿದೆ. ವಾಪಸ್ ಬೆಳಿಗ್ಗೆ 11.15 ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 3.15 ಕ್ಕೆ ಯಾಂಗೂನ್ ತಲುಪಲಿದೆ. ಇದರಿಂದ ದಕ್ಷಿಣ ಭಾರತದವರಿಗೆ ಅದರಲ್ಲೂ ಮ್ಯಾನ್ಮಾರ್‌ ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಇದು ಅನುಕೂಲ ಆಗಲಿದೆ ಎಂದು ಕಂಪನಿ ತಿಳಿಸಿದೆ.

ಮ್ಯಾನ್ಮಾರ್‌ ಏರ್‌ವೇಸ್ ಇಂಟರನ್ಯಾಷನಲ್ ಕಂಪನಿಯು 18 ದೇಶಗಳೊಂದಿಗೆ ವಿಮಾನಯಾನ ಸೌಲಭ್ಯ ಕಲ್ಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.