ADVERTISEMENT

ಮೂಲ ಸೌಕರ್ಯಗಳಿಗೆ ನಬಾರ್ಡ್‌ನಿಂದ ₹ 935 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:54 IST
Last Updated 7 ಡಿಸೆಂಬರ್ 2018, 19:54 IST

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ಮೂಲ ಸೌಕರ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಇದುವರೆಗೆ ₹ 935 ಕೋಟಿ ಮಂಜೂರು ಮಾಡಿದೆ.

ಮಾರುಕಟ್ಟೆ, ಎಪಿಎಂಸಿಗಳಲ್ಲಿ 362 ಹರಾಜು ಕಟ್ಟೆ, 148 ಉಗ್ರಾಣ, 631 ಕಿ.ಮೀ ಗ್ರಾಮೀಣ ರಸ್ತೆ, 71 ಸೇತುವೆ, 108 ಪಶುವೈದ್ಯ ಆಸ್ಪತ್ರೆ ನಿರ್ಮಾಣ, ಹನಿ ನೀರಾವರಿ ಯೋಜನೆ, ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ, 162 ಗ್ರಾಮೀಣ ಶಿಕ್ಷಣ ಸಂಸ್ಥೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಈ ಹಣ ವಿನಿಯೋಗಿಸಲಾಗಿದೆ.

28 ಜಿಲ್ಲೆಗಳಲ್ಲಿ 14.5 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯ ಸಂಗ್ರಹಿಸುವ ಸಾಮರ್ಥ್ಯದ ಉಗ್ರಾಣಗಳ ನಿರ್ಮಾಣಕ್ಕೆ ‘ನಬಾರ್ಡ್‌’ ಇದುವರೆಗೆ ₹ 14,537 ಕೋಟಿ ಬಿಡುಗಡೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.