ADVERTISEMENT

ನವೋದ್ಯಮ: ರಾಜ್ಯಗಳ ಶ್ರೇಯಾಂಕ ಶುಕ್ರವಾರ ಬಿಡುಗಡೆ

ಪಿಟಿಐ
Published 8 ಸೆಪ್ಟೆಂಬರ್ 2020, 15:29 IST
Last Updated 8 ಸೆಪ್ಟೆಂಬರ್ 2020, 15:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನವೋದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣ ಕಲ್ಪಿಸಿರುವ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೋದ್ಯಮ ಸ್ಥಾಪನೆ ಸುಲಭಗೊಳಿಸುವಂತಹ ನೀತಿ ರೂಪಿಸಿರುವುದು, ನವೋದ್ಯಮ ಪೋಷಿಸುವ ಕೇಂದ್ರಗಳು (ಇನ್‌ಕ್ಯುಬೇಷನ್‌ ಸೆಂಟರ್ಸ್‌), ಬಂಡವಾಳ ಹೂಡಿಕೆ... ಹೀಗೆ ಇನ್ನೂ ಹಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಶ್ರೇಯಾಂಕ ನೀಡಲಾಗುತ್ತದೆ.

2018ರ ಆವೃತ್ತಿಯಲ್ಲಿ ಗುಜರಾತ್‌ ಮೊದಲ ಸ್ಥಾನ ಪಡೆದುಕೊಂಡಿತ್ತು. ಕರ್ನಾಟಕ, ಕೇರಳ, ಒಡಿಶಾ ಮತ್ತು ರಾಜಸ್ಥಾನ ನಂತರದ ಸ್ಥಾನ ಪಡೆದಿದ್ದವು.

ADVERTISEMENT

ನವೋದ್ಯಮಗಳಿಗೆ ತೆರಿಗೆ ವಿನಾಯಿತಿ, ಇನ್‌ಸ್ಪೆಕ್ಟರ್‌ ರಾಜ್‌ ವ್ಯವಸ್ಥೆಯಿಂದ ಮುಕ್ತಿ ಮತ್ತು ಬಂಡವಾಳ ಗಳಿಕೆ ತೆರಿಗೆಯಿಂದ ವಿನಾಯಿತಿಯಂತಹ ಉತ್ತೇಜನಾ ಕ್ರಮಗಳನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರಲ್ಲಿ ಸ್ಟಾರ್ಟ್‌ಅಪ್‌ ಇಂಡಿಯಾ ಆ್ಯಕ್ಷನ್‌ ಪ್ಲಾನ್‌ಗೆ ಚಾಲನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.