ADVERTISEMENT

ಫಾಸ್ಟ್ಯಾಗ್‌ | ಕೆವೈವಿ ‌ಇನ್ನಿಲ್ಲ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಪಿಟಿಐ
Published 1 ಜನವರಿ 2026, 16:03 IST
Last Updated 1 ಜನವರಿ 2026, 16:03 IST
   

ನವದೆಹಲಿ: ಹೊಸ ಕಾರು, ಜೀಪ್, ವ್ಯಾನ್‌ಗಳ ಫಾಸ್ಟ್ಯಾಗ್‌ಗೆ ‘ನಿಮ್ಮ ವಾಹನವನ್ನು ತಿಳಿಯಿರಿ’ (ಕೆವೈವಿ) ಪ್ರಕ್ರಿಯೆಯನ್ನು ಫೆಬ್ರುವರಿ 1ರಿಂದ ಸ್ಥಗಿತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.

ಹೆದ್ದಾರಿ ಬಳಕೆದಾರರು ಫಾಸ್ಟ್ಯಾಗ್‌ ಸಕ್ರಿಯಗೊಳಿಸುವಿಕೆ ನಂತರ ಎದುರಿಸುವ ಕಿರುಕುಳವನ್ನು ತಡೆಯಲು ಇದು ನೆರವಾಗಲಿದೆ ಎಂದು ಎನ್‌ಎಚ್‌ಎಐ ಹೇಳಿದೆ.

ಕಾರುಗಳಿಗೆ ಈಗಾಗಲೇ ನೀಡಲಾಗಿರುವ ಫಾಸ್ಟ್ಯಾಗ್‌ಗಳಿಗೆ ಕೆವೈವಿ ಕಡ್ಡಾಯವಲ್ಲ. ಫಾಸ್ಟ್ಯಾಗ್‌ ಕಳೆದುಕೊಂಡಿದ್ದರೆ, ತಪ್ಪಾದ ಫಾಸ್ಟ್ಯಾಗ್‌ ವಿತರಣೆ ಆಗಿದ್ದರೆ ಅಥವಾ ದುರುಪಯೋಗಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿದ ಸಂದರ್ಭಗಳಲ್ಲಿ ಮಾತ್ರ ಕೆವೈವಿ ಅಗತ್ಯವಿರುತ್ತದೆ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.