ADVERTISEMENT

ಹೊಸ ಮೂರು ವಾಹನಗಳ ಬಿಡುಗಡೆಗೆ ನಿಸ್ಸಾನ್ ಸಜ್ಜು

ಪಿಟಿಐ
Published 18 ಡಿಸೆಂಬರ್ 2025, 16:09 IST
Last Updated 18 ಡಿಸೆಂಬರ್ 2025, 16:09 IST
<div class="paragraphs"><p>ನಿಸ್ಸಾನ್</p></div>

ನಿಸ್ಸಾನ್

   

ನವದೆಹಲಿ: ಮುಂದಿನ 14ರಿಂದ 16 ತಿಂಗಳಿನಲ್ಲಿ ಮೂರು ಹೊಸ ಮಾದರಿಯ ವಾಹನಗಳನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಜಪಾನ್‌ನ ವಾಹನ ತಯಾರಿಕಾ ಕಂಪನಿ ನಿಸ್ಸಾನ್‌ ಗುರುವಾರ ಹೇಳಿದೆ.

ಮಾರುಕಟ್ಟೆಗೆ ಬರಲಿರುವ ತನ್ನ ಏಳು ಆಸನ ಸಾಮರ್ಥ್ಯದ ವಾಹನದ ಹೆಸರು ‘ಗ್ರಾವೈಟ್‌’ ಎಂದು ಕಂಪನಿ ತಿಳಿಸಿದೆ. ಕಂಪನಿಯು ಈಗ ದೇಶದಲ್ಲಿ 155 ಮಳಿಗೆಗಳನ್ನು ಹೊಂದಿದ್ದು, 2026–27ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. 

ADVERTISEMENT

‘ಗ್ರಾವೈಟ್’ ಎಂಪಿವಿಯನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಮಧ್ಯಮ ಗಾತ್ರದ ಎಸ್‌ಯುವಿ ಟೆಕ್ಟಾನ್‌ ಅನ್ನು 2026ರ ಮಧ್ಯ ಭಾಗದಲ್ಲಿ ಮತ್ತು ಏಳು ಆಸನದ ಎಸ್‌ಯುವಿ ಅನ್ನು 2027ರ ಆರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.