ADVERTISEMENT

ವಿದೇಶಿ ನೇರ ಹೂಡಿಕೆ ಪ್ರಮಾಣದಲ್ಲಿ ಇಳಿಕೆಯಿಲ್ಲ: ಪೀಯೂಷ್ ಗೋಯಲ್‌

ಪಿಟಿಐ
Published 10 ಜೂನ್ 2025, 14:34 IST
Last Updated 10 ಜೂನ್ 2025, 14:34 IST
<div class="paragraphs"><p>ಪೀಯೂಷ್ ಗೋಯಲ್‌</p></div>

ಪೀಯೂಷ್ ಗೋಯಲ್‌

   

ಬುನ್: ‘ಭಾರತಕ್ಕೆ ಹರಿದು ಬರುತ್ತಿರುವ ವಿದೇಶಿ ನೇರ ಹೂಡಿಕೆಯು (ಎಫ್‌ಡಿಐ) ಕಡಿಮೆ ಆಗುವ ಯಾವುದೇ ಲಕ್ಷಣ ಕಂಡುಬಂದಿಲ್ಲ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್‌ ಹೇಳಿದ್ದಾರೆ.

ಜಾಗತಿಕವಾಗಿ ವಿವಿಧ ದೇಶಗಳಲ್ಲಿನ ಬಡ್ಡಿ ದರದಲ್ಲಿನ ಬದಲಾವಣೆಯಿಂದ ಹೂಡಿಕೆಯಲ್ಲಿ ಕೆಲವೊಮ್ಮೆ ಏರಿಳಿತ ಉಂಟಾಗಬಹುದು ಎಂದು ಹೇಳಿದ್ದಾರೆ.

ADVERTISEMENT

ಭಾರತಕ್ಕೆ ವಿದೇಶಿಗಳಿಂದಾಗುವ ಹೂಡಿಕೆ ಪ್ರಮಾಣವು ವೇಗ ಪ‍ಡೆದುಕೊಂಡಿದೆ. ದೇಶದಲ್ಲಿ ಎಫ್‌ಡಿಐಗೆ ಉತ್ತೇಜನ ನೀಡಲು ಸರ್ಕಾರವು ಸಲಹೆಗಳನ್ನು ಸ್ವೀಕರಿಸಲು ಮತ್ತು ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಿದ್ಧವಿದೆ ಎಂದರು. 

ಕಳೆದ 11 ಆರ್ಥಿಕ ವರ್ಷಗಳಲ್ಲಿ (2014ರಿಂದ 2025ರ ಈ ವರೆಗೆ) ಭಾರತದಲ್ಲಿ ಒಟ್ಟು ₹64 ಲಕ್ಷ ಕೋಟಿಗೂ ಹೆಚ್ಚು ವಿದೇಶಿ ನೇರ ಹೂಡಿಕೆ ಆಗಿದೆ. 2003ರಿಂದ 2014ರವರೆಗಿನ 11 ವರ್ಷಗಳ ಅವಧಿಯಲ್ಲಿ ₹26.39 ಲಕ್ಷ ಕೋಟಿ ಒಳಹರಿವು ಆಗಿದೆ. ಈ ಹೂಡಿಕೆಗೆ ಹೋಲಿಸಿದರೆ ಶೇ 143ರಷ್ಟು ಏರಿಕೆಯಾಗಿದೆ ಎಂದು ಹೇಳಿದ್ದಾರೆ. 

2013–14ರಲ್ಲಿ 89 ದೇಶಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದವು. 2024–25ರ ಆರ್ಥಿಕ ವರ್ಷದ ವೇಳೆಗೆ ಈ ದೇಶಗಳ ಸಂಖ್ಯೆ 112ಕ್ಕೆ ಹೆಚ್ಚಳವಾಗಿದೆ. ಅಲ್ಲದೇ, ಭಾರತವು ಜಾಗತಿಕವಾಗಿ ಹೂಡಿಕೆ ತಾಣವಾಗುತ್ತಿದೆ ಎಂದು ತಿಳಿಸಿದ್ದಾರೆ.

2024-25ರ ಆರ್ಥಿಕ ವರ್ಷದಲ್ಲಿ ₹6.93 ಲಕ್ಷ ಕೋಟಿಯಷ್ಟು ವಿದೇಶಿ ನೇರ ಹೂಡಿಕೆಯಾಗಿದೆ. ಇದು ಇದರ ಹಿಂದಿನ ಮೂರು ಆರ್ಥಿಕ ವರ್ಷಗಳಲ್ಲಿನ ಅತ್ಯಧಿಕ ಮೊತ್ತ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.