ADVERTISEMENT

‘ಬ್ಯಾಂಕ್‌ ಖಾತೆ: ಧರ್ಮ ಘೋಷಣೆಯ ಅಗತ್ಯ ಇಲ್ಲ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 20:18 IST
Last Updated 22 ಡಿಸೆಂಬರ್ 2019, 20:18 IST

ನವದೆಹಲಿ (ಪಿಟಿಐ): ಬ್ಯಾಂಕ್‌ ಖಾತೆ ಆರಂಭಿಸಲು ಮತ್ತು ಬ್ಯಾಂಕ್‌ಗಳ ‘ತಿಳಿಯಿರಿ ನಿಮ್ಮ ಗ್ರಾಹಕರು’ (ಕೆವೈಸಿ) ಉದ್ದೇಶಕ್ಕೆ ಧರ್ಮ ಘೋಷಣೆ ಮಾಡುವ ಅಗತ್ಯ ಇಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಭಾರತದ ನಾಗರಿಕರು ಬ್ಯಾಂಕ್‌ ಖಾತೆ ಆರಂಭಿಸಲು ತಾವು ಯಾವ ಧರ್ಮಕ್ಕೆ ಸೇರಿದವರು ಎನ್ನುವುದನ್ನು ಘೋಷಿಸಬೇಕು ಎನ್ನುವುದಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳು ಆಧಾರರಹಿತವಾಗಿವೆ ಎಂದು ಹಣಕಾಸು ಕಾರ್ಯದರ್ಶಿ ರಾಜೀವ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಗ್ರಾಹಕರು ಮತ್ತು ಠೇವಣಿದಾರರು ತಮ್ಮ ಧರ್ಮದ ಮಾಹಿತಿ ನೀಡಲು ಬ್ಯಾಂಕ್‌ಗಳು ಕೇಳಿಕೊಳ್ಳಬಹುದು ಎಂದು ವರದಿಯಾಗಿರುವುದಕ್ಕೆ ಈ ಸ್ಪಷ್ಟನೆ ನೀಡಲಾಗಿದೆ.ಭಾರತೀಯರು ಈ ಬಗೆಯ ಮಾಹಿತಿ ನೀಡುವ ಅಗತ್ಯ ಇಲ್ಲ. ಇಂತಹ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ರಾಜೀವ್‌ ಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.