ADVERTISEMENT

ಯುಪಿಐ ಜೊತೆ ಕ್ರೆಡಿಟ್‌ ಕಾರ್ಡ್ ಜೋಡಿಸಲು ಎಚ್‌ಡಿಎಫ್‌ಸಿ ಅವಕಾಶ

ಪಿಟಿಐ
Published 16 ಫೆಬ್ರುವರಿ 2023, 15:21 IST
Last Updated 16 ಫೆಬ್ರುವರಿ 2023, 15:21 IST
   

ಮುಂಬೈ: ರುಪೇ ಕ್ರೆಡಿಟ್‌ ಕಾರ್ಡ್‌ಅನ್ನು ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ (ಯುಪಿಐ) ಬಳಕೆ ಮಾಡಲು ಎಚ್‌ಡಿಎಫ್‌ಸಿ ಬ್ಯಾಂಕ್ ಅವಕಾಶ ಕಲ್ಪಿಸಿದೆ. ಈ ಅವಕಾಶ ನೀಡಿರುವ ಮೊದಲ ಖಾಸಗಿ ಬ್ಯಾಂಕ್ ಇದು.

ಯುಪಿಐ ಐಡಿ ಜೊತೆ ಉಳಿತಾಯ ಖಾತೆಯನ್ನು ಮಾತ್ರ ಜೋಡಿಸಲು ಅವಕಾಶ ಇತ್ತು. ಉಳಿತಾಯ ಖಾತೆಯಿಂದ ಹಣ ಪಾವತಿ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐ ಐಡಿ ಜೊತೆ ಜೋಡಿಸಬಹುದು. ಯು‍ಪಿಐ ಮೂಲಕ ಕ್ರೆಡಿಟ್‌ ಕಾರ್ಡ್‌ಗಳಿಂದ ಪಾವತಿ ಮಾಡಬಹುದು.

ಬ್ಯಾಂಕ್‌ನ ಈ ನಡೆಯು ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಿದೆ ಎಂದು ಪಾವತಿಗಳ ಮುಖ್ಯಸ್ಥ ಪರಾಗ್ ರಾವ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.