ADVERTISEMENT

ನೇಪಾಳ: ಯುಪಿಐ ಪಾವತಿ ಸೇವೆ ಆರಂಭ

ಪಿಟಿಐ
Published 8 ಮಾರ್ಚ್ 2024, 15:42 IST
Last Updated 8 ಮಾರ್ಚ್ 2024, 15:42 IST
<div class="paragraphs"><p>ಯುಪಿಐ</p></div>

ಯುಪಿಐ

   

(ಐಸ್ಟೋಕ್ ಚಿತ್ರ)

ಮುಂಬೈ: ಡಿಜಿಟಲ್‌ ವಹಿವಾಟು ಹೆಚ್ಚಿಸಲು ನೇ‍ಪಾಳದಲ್ಲಿ ಶುಕ್ರವಾರದಿಂದ ಯುಪಿಐ ಪಾವತಿ ಸೇವೆ ಆರಂಭಗೊಂಡಿದೆ ಎಂದು ರಾಷ್ಟ್ರೀಯ ಪಾವತಿಗಳ ನಿಗಮ (ಎನ್‌ಪಿಸಿಐ) ತಿಳಿಸಿದೆ.

ADVERTISEMENT

ಎನ್‌ಪಿಸಿಐನ ಇಂಟರ್‌ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್‌ (ಎನ್‌ಐಪಿಎಲ್) ಹಾಗೂ ನೇ‍ಪಾಳದ ಫೋನ್‌ಪೇ ಪೇಮೆಂಟ್‌ ಸರ್ವಿಸ್‌ ನಡುವೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಸಂಬಂಧ ಒಪ್ಪಂದವಾಗಿತ್ತು. ಸದ್ಯ ವಹಿವಾಟು ನಡೆಸುವ ಯುಪಿಐ ಬಳಕೆದಾರರು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ನೇಪಾಳದ ವರ್ತಕರಿಗೆ ಹಣ ಪಾವತಿಸಬಹುದಾಗಿದೆ. 

‘ಈ ಡಿಜಿಟಲ್‌ ಪೇಮೆಂಟ್‌ ಸೇವೆಯಿಂದ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧವು ಸದೃಢಗೊಳ್ಳಲಿದೆ’ ಎಂದು ಎನ್‌ಐಪಿಎಲ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿತೇಶ್‌ ಶುಕ್ಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.