ADVERTISEMENT

‘ನಿಫ್ಟಿ ನೆಕ್ಸ್ಟ್ 50’ಗೆ ಅದಾನಿ ವಿಲ್ಮರ್‌

ಪಿಟಿಐ
Published 18 ಫೆಬ್ರುವರಿ 2023, 17:44 IST
Last Updated 18 ಫೆಬ್ರುವರಿ 2023, 17:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು (ಎನ್‌ಎಸ್‌ಇ) ಅದಾನಿ ವಿಲ್ಮರ್‌ ಮತ್ತು ಅದಾನಿ ಪವರ್‌ ಕಂಪನಿಗಳನ್ನು ನಿಫ್ಟಿ ಸೂಚ್ಯಂಕಗಳಲ್ಲಿ ಸೇರಿಸಿದೆ.

ಮಾರ್ಚ್‌ 31ರಿಂದ ಜಾರಿಗೆ ಬರುವಂತೆ ಅದಾನಿ ವಿಲ್ಮರ್‌ ಕಂಪನಿಯು ನಿಫ್ಟಿ ನೆಕ್ಸ್ಟ್‌ 50 ಮತ್ತು ನಿಫ್ಟಿ 100ನ ಭಾಗವಾಗಲಿದೆ. ಅದಾನಿ ಪವರ್‌ ಕಂಪನಿಯು ನಿಫ್ಟಿ 500, ನಿಫ್ಟಿ 200, ನಿಫ್ಟಿ ಮಿಡ್‌ಕ್ಯಾಪ್‌ 100, ನಿಫ್ಟಿ ಮಿಡ್‌ಕ್ಯಾಪ್‌ 150, ನಿಫ್ಟಿ ಲಾರ್ಜ್‌ ಮಿಡ್‌ಕ್ಯಾಪ್‌ 250 ಮತ್ತು ನಿಫ್ಟಿ ಮಿಡ್‌ಸ್ಮಾಲ್‌ಕ್ಯಾಪ್‌ 400 ಸೂಚ್ಯಂಕಗಳಲ್ಲಿ ಸೇರಲಿದೆ.

ಅದಾನಿ ವಿಲ್ಮರ್‌ ಅಲ್ಲದೆ ಎಬಿಬಿ ಇಂಡಿಯಾ, ಕೆನರಾ ಬ್ಯಾಂಕ್‌, ಪೇಜ್‌ ಇಂಡಸ್ಟ್ರೀಸ್‌ ಮತ್ತು ವರುಣ್‌ ಬೆವರೇಜಸ್‌ ಕಂಪನಿಗಳನ್ನು ಸಹ ನಿಫ್ಟಿ ನೆಕ್ಸ್ಟ್‌ 50 ಇಂಡೆಕ್ಸ್‌ನಲ್ಲಿ ಸೇರಿಸಲಾಗಿದೆ.

ADVERTISEMENT

ಬಂಧನ್‌ ಬ್ಯಾಂಕ್‌, ಬಯೋಕಾನ್‌, ಗ್ಲಾಂಡ್‌ ಫಾರ್ಮಾ, ಎಂಫಸಿಸ್‌ ಮತ್ತು ಒನ್‌ 97 ಕಮ್ಯುನಿಕೇಷನ್ಸ್‌ ಕಂಪನಿಗಳನ್ನು ನಿಫ್ಟಿ ನೆಕ್ಸ್ಟ್‌ 50 ಇಂಡೆಕ್ಸ್‌ನಿಂದ ಕೈಬಿಡಲಾಗಿದೆ.

ಎನ್‌ಎಸ್‌ಇ ಇಂಡಿಸಿಸ್‌ ಲಿಮಿಟೆಡ್‌ನ ಉಪ ಸಮಿತಿಯು ಈ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ. ಎಲ್ಲಾ ಬದಲಾವಣೆಗಳು ಸಹ ಮಾರ್ಚ್‌ 31ರಿಂದ ಜಾರಿಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನಿಫ್ಟಿ 50 ಇಂಡೆಕ್ಸ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.