ADVERTISEMENT

ಎನ್‌ಟಿಪಿಸಿ: ಕಾರ್ಬನ್‌ ಡೈ ಆಕ್ಸೈಡ್‌ ಬ್ಯಾಟರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 16:09 IST
Last Updated 29 ಜನವರಿ 2025, 16:09 IST
ಎನ್‌ಟಿಪಿಸಿ
ಎನ್‌ಟಿಪಿಸಿ   

ಬೆಂಗಳೂರು: ರಾಜ್ಯದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿಯಲ್ಲಿರುವ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು (ಎನ್‌ಟಿಪಿಸಿ) ಅತ್ಯಾಧುನಿಕ ಕಾರ್ಬನ್‌ ಡೈ ಆಕ್ಸೈಡ್‌ ಬ್ಯಾಟರಿಯನ್ನು ಬಿಡುಗಡೆ ಮಾಡಿದೆ.

ಎನ್‌ಟಿಪಿಸಿಯ ಎನರ್ಜಿ ಟೆಕ್ನಾಲಜಿ ರಿಸರ್ಚ್ ಅಲೆಯನ್ಸ್‌ನಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ. ತ್ರಿವೇಣಿ ಟರ್ಬೈನ್ ಲಿಮಿಟೆಡ್ ಮತ್ತು ಇಟಲಿಯ ಎನರ್ಜಿ ಡೋಮ್ ಸಹಯೋಗದಡಿ ಕಾರ್ಯಗತಗೊಳಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಪ್ರತಿ ಗಂಟೆಗೆ 160 ಮೆಗಾವಾಟ್ ಸಾಮರ್ಥ್ಯ ಹೊಂದಿರುವ ಈ ಬ್ಯಾಟರಿಯನ್ನು ಕೂಡಗಿಯಲ್ಲಿ ಸ್ಥಾಪಿಸಲಾಗುವುದು. ಈ ಯೋಜನೆಯು ಇಂಧನ ವಲಯದ ವೈವಿಧ್ಯಕ್ಕೆ ಸಹಕಾರಿಯಾಗಲಿದೆ. ಜೊತೆಗೆ, ಕಂಪನಿಯ ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳಕ್ಕೆ ನೆರವಾಗಲಿದೆ.  ಇದು ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ನಿರ್ಮಾಣದ ಗುರಿ ಸಾಧನೆಯ ಬದ್ಧತೆಗೆ ಕನ್ನಡಿ ಹಿಡಿದಿದೆ ಎಂದು ತಿಳಿಸಿದೆ.

ADVERTISEMENT

‘ದೀರ್ಘಾವಧಿಯ ಶಕ್ತಿ ಸಂಗ್ರಹಣೆ ಕ್ಷೇತ್ರದಲ್ಲಿ ಇದು ಹೆಗ್ಗುರುತಾಗಿದೆ. ಕೂಡಗಿ ಸ್ಥಾವರದಲ್ಲಿ ಕಾರ್ಬನ್‌ ಡೈ ಆಕ್ಸೈಡ್‌ ಬ್ಯಾಟರಿ ಶಕ್ತಿ ಸಂಗ್ರಹ ತಂತ್ರಜ್ಞಾನ ಅನುಷ್ಠಾನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಎನ್‌ಟಿಪಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗುರುದೀಪ್ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.