ADVERTISEMENT

ದೇಶದ ಬ್ಯಾಂಕಿಂಗ್ ವಲಯದಲ್ಲಿ ಒಂದು ವರ್ಷದಲ್ಲಿ 13,530 ವಂಚನೆ ಪ್ರಕರಣ ವರದಿ: ಆರ್‌ಬಿಐ

ಪಿಟಿಐ
Published 30 ಮೇ 2023, 14:33 IST
Last Updated 30 ಮೇ 2023, 14:33 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ದೇಶದ ಬ್ಯಾಂಕಿಂಗ್ ವಲಯದಲ್ಲಿ 2022–23ನೆಯ ಆರ್ಥಿಕ ವರ್ಷದಲ್ಲಿ ಒಟ್ಟು 13,530 ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಆರ್‌ಬಿಐ ಹೇಳಿದೆ. ಆದರೆ, ವಂಚನೆಯ ಪ್ರಕರಣಗಳಿಗೆ ಸಂಬಂಧಿಸಿದ ಮೊತ್ತವು ₹30,252ಕ್ಕೆ ಇಳಿಕೆಯಾಗಿದೆ.

ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದು ಡಿಜಿಟಲ್ ಪಾವತಿಗಳ (ಕಾರ್ಡ್‌ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ) ಸುತ್ತ ಎಂದು ವಾರ್ಷಿಕ ವರದಿಯಲ್ಲಿ ಕೇಂದ್ರೀಯ ಬ್ಯಾಂಕ್ ಹೇಳಿದೆ.

2021-22ರಲ್ಲಿ ₹59,819 ಕೋಟಿ ಮೊತ್ತದ ಒಟ್ಟು 9,097 ವಂಚನೆ ಪ್ರಕರಣಗಳು ವರದಿಯಾಗಿದ್ದವು. 2020–21ರಲ್ಲಿ ₹1.32 ಲಕ್ಷ ಕೋಟಿ ಮೊತ್ತದ ಒಟ್ಟು 7,338 ಪ್ರಕರಣಗಳು ವರದಿಯಾಗಿದ್ದವು.

ADVERTISEMENT

ವಂಚನೆ ಪ್ರಕರಣಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿರುವುದು ಖಾಸಗಿ ಬ್ಯಾಂಕ್‌ಗಳಲ್ಲಿ. ವಂಚನೆಯ ಮೊತ್ತ ಹೆಚ್ಚಿರುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.