ADVERTISEMENT

ಏಕರೂಪ ದರ ನಿಗದಿ: ಓಲಾ, ಉಬರ್‌ ಸ್ಪಷ್ಟನೆ

ಪಿಟಿಐ
Published 24 ಜನವರಿ 2025, 15:23 IST
Last Updated 24 ಜನವರಿ 2025, 15:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ಯಾವುದೇ ಸ್ಥಳಕ್ಕೆ ದರ ನಿಗದಿಗೆ ಸಂಬಂಧಿಸಿದಂತೆ ಏಕರೂಪತೆ ಕಾಯ್ದುಕೊಳ್ಳಲಾಗಿದೆ. ವಿಭಿನ್ನ ದರ ನಿಗದಿಯಂತಹ ಕ್ರಮ ಅನುಸರಿಸುತ್ತಿಲ್ಲ’ ಎಂದು ಓಲಾ ಕಂಪನಿಯು ಶುಕ್ರವಾರ ಸ್ಪಷ್ಟಪಡಿಸಿದೆ.

ಗ್ರಾಹಕರು ಐಫೋನ್‌ನಲ್ಲಿ ಬುಕಿಂಗ್‌ ಮಾಡುತ್ತಿದ್ದಾರೆಯೇ ಅಥವಾ ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಬುಕಿಂಗ್ ಮಾಡುತ್ತಿದ್ದಾರೆಯೇ ಎಂಬುದರ ಆಧಾರದ ಮೇಲೆ ಒಂದೇ ಸ್ಥಳಕ್ಕೆ ವಿಭಿನ್ನ ದರ ನಿಗದಿಪಡಿಸಲಾಗುತ್ತಿದೆ ಎಂದು ದೂರಲಾಗಿತ್ತು. ಈ ಬಗ್ಗೆ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಓಲಾ ಮತ್ತು ಉಬರ್‌ಗೆ ನೋಟಿಸ್‌ ನೀಡಿದೆ.

‘ಈ ವಿಷಯವು ಕಂಪನಿಯ ಗಮನಕ್ಕೆ ಬಂದ ತಕ್ಷಣವೇ ನ್ಯಾಯಸಮ್ಮತವಾಗಿ ದರ ನಿಗದಿಪಡಿಸುತ್ತಿರುವ ಬಗ್ಗೆ ಸಿಸಿಪಿಎಗೆ ವಿವರಣೆ ನೀಡಲಾಗಿದೆ’ ಎಂದು ಓಲಾ ವಕ್ತಾರರು ತಿಳಿಸಿದ್ದಾರೆ.

ADVERTISEMENT

ದರ ನಿಗದಿಗೆ ಸಂಬಂಧಿಸಿದಂತೆ ಕಂಡುಬಂದಿರುವ ತಪ್ಪು ತಿಳಿವಳಿಕೆ ಬಗ್ಗೆ ಸಿಸಿಪಿಎಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

‘ಗ್ರಾಹಕರು ಬಳಸುವ ಫೋನ್‌ಗಳ ಆಧಾರದ ಮೇಲೆ ಬೆಲೆ ನಿಗದಿ‍ಪಡಿಸುತ್ತಿಲ್ಲ. ಈ ಕುರಿತು ಸಿಸಿಪಿಎಗೆ ವಿವರಣೆ ನೀಡಲಾಗುವುದು’ ಎಂದು ಉಬರ್‌ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.