ADVERTISEMENT

₹ 1,483 ಕೋಟಿ ಸಂಗ್ರಹಿಸಿದ ಓಲಾ ಎಲೆಕ್ಟ್ರಿಕ್

ಪಿಟಿಐ
Published 30 ಸೆಪ್ಟೆಂಬರ್ 2021, 16:49 IST
Last Updated 30 ಸೆಪ್ಟೆಂಬರ್ 2021, 16:49 IST
   

ನವದೆಹಲಿ: ಫಾಲ್ಕನ್‌ ಎಡ್ಜ್‌, ಸಾಫ್ಟ್‌ಬ್ಯಾಂಕ್‌ ಮತ್ತು ಇತರೆ ಹೂಡಿಕೆದಾರರಿಂದ ₹ 1,483.7 ಕೋಟಿ ಬಂಡವಾಳ ಸಂಗ್ರಹ ಮಾಡಿರುವುದಾಗಿ ಓಲಾ ಎಲೆಕ್ಟ್ರಿಕ್‌ ಕಂಪನಿಯು ಗುರುವಾರ ತಿಳಿಸಿದೆ. ಈ ಬಂಡವಾಳ ಸಂಗ್ರಹದಿಂದಾಗಿ ಕಂಪನಿಯ ಒಟ್ಟಾರೆ ಮೌಲ್ಯವು ₹ 22,272 ಕೋಟಿಗಳಿಗೆ ಏರಿಕೆ ಆಗಿದೆ. ಈ ಬಂಡವಾಳ ಸಂಗ್ರಹವು ಕಂಪನಿಯ ‘ಮಿಷನ್‌ ಎಲೆಕ್ಟ್ರಿಕ್‌’ ಅನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಇಡೀ ಜಗತ್ತಿಗೆ ಭವಿಷ್ಯದ ತಂತ್ರಜ್ಞಾನ ನಿರ್ಮಿಸುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಭಾರತ ಹೊಂದಿದೆ. ನಾನು ನಮ್ಮ ಹೂಡಿಕೆದಾರರಿಗೆ ಧನ್ಯವಾದ ಹೇಳುತ್ತೇನೆ ಮತ್ತು ಹೊಸ ಹೂಡಿಕೆದಾರರನ್ನು ಓಲಾಕ್ಕೆ ಸ್ವಾಗತಿಸುತ್ತೇನೆ’ ಎಂದು ಓಲಾ ಅಧ್ಯಕ್ಷ ಭವಿಷ್ ಅಗರ್ವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT