
ಬೆಂಗಳೂರು/ನವದೆಹಲಿ: ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್, ತನ್ನ ಸೇವಾ ಜಾಲವನ್ನು ವಿಸ್ತರಿಸಲು ಮುಂದಾಗಿದೆ.
ಓಲಾ ಕಂಪನಿಯು ತನ್ನ ವಾಹನಗಳ ಬಿಡಿಭಾಗಗಳು, ಉಪಕರಣಗಳನ್ನು ತನ್ನ ಗ್ರಾಹಕರಿಗೆ ಮಾತ್ರವಲ್ಲದೆ, ಸ್ವತಂತ್ರವಾಗಿ ಗ್ಯಾರೇಜ್ ನಡೆಸುತ್ತಿರುವವರಿಗೆ, ಮೆಕಾನಿಕ್‌ಗಳಿಗೆ ಕೂಡ ನೀಡುವುದಾಗಿ ಸೋಮವಾರ ತಿಳಿಸಿದೆ.
ಜೊತೆಗೆ, ವಾಹನಗಳ ದುರಸ್ತಿಗೆ ಸಂಬಂಧಿಸಿದ ಮಾಹಿತಿಯು ಗ್ಯಾರೇಜ್ ಮಾಲೀಕರು ಮತ್ತು ಮೆಕಾನಿಕ್‌ಗಳಿಗೆ ಕೂಡ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದೆ.
‘ಇಂದಿನಿಂದ ಓಲಾ ಎಲೆಕ್ಟ್ರಿಕ್‌ನ ಬಿಡಿಭಾಗಗಳನ್ನು ಓಲಾ ಎಲೆಕ್ಟ್ರಿಕ್‌ನ ಗ್ರಾಹಕರ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಖರೀದಿಸಬಹುದು. ಪ್ರತಿ ಗ್ರಾಹಕ ಮತ್ತು ಗ್ಯಾರೇಜ್‌ಗಳು ಉನ್ನತ ಗುಣಮಟ್ಟದ, ಪ್ರಮಾಣೀಕೃತ ಬಿಡಿಭಾಗಗಳನ್ನು ಮಧ್ಯವರ್ತಿಗಳು ಇಲ್ಲದೇ ಖರೀದಿಸಬಹುದು’ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಭವೀಶ್ ಅಗರ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.