ADVERTISEMENT

ಒನ್‌ಪ್ಲಸ್‌ 6ಟಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 19:32 IST
Last Updated 31 ಅಕ್ಟೋಬರ್ 2018, 19:32 IST

ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒನ್‌ಪ್ಲಸ್, ತನ್ನ ಫ್ಲ್ಯಾಗ್‌ಶಿಪ್ ಆವೃತ್ತಿ ಒನ್‌ಪ್ಲಸ್ 6–ಟಿ ಸ್ಮಾರ್ಟ್‌ಫೋನ್ ಅನ್ನು ಮಂಗಳವಾರ ರಾತ್ರಿ ಇಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅತಿ ವೇಗದ ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ತಂತ್ರಜ್ಞಾನದ ಸ್ಕ್ರೀನ್‌ ಅನ್‌ಲಾಕ್‌ ಫೀಚರ್‌ ಒಳಗೊಂಡಿರುವ, ಮಿರರ್‌ ಬ್ಲ್ಯಾಕ್‌ ಮತ್ತು ಮಿಡ್‌ನೈಟ್‌ ಬ್ಲ್ಯಾಕ್‌ ಬಣ್ಣದ ಈ ಫೋನ್‌ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ.

6.41 ಇಂಚಿನ, ಆಪ್ಟಿಕ್‌ ಅಮೋಲ್ಡ್‌ ಡಿಸ್‌ಪ್ಲೇ ವ್ಯವಸ್ಥೆಯೊಂದಿಗಿನ ಗಾಜಿನ ವಿನ್ಯಾಸವುಳ್ಳ ಅತ್ಯಾಧುನಿಕ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ ಒಳಗೊಂಡಿರುವುದು ಈ ಫೋನ್‌ನ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

ADVERTISEMENT

ಹೊಸ ನೈಟ್‌ಸ್ಕೇಪ್‌ ಫೀಚರ್‌ನ ಕಾರಣದಿಂದಾಗಿ ಅತಿ ಕಡಿಮೆ ಬೆಳಕಿನಲ್ಲೂ ಸ್ಪಷ್ಟ ಮತ್ತು ನಿಖರವಾದ ಚಿತ್ರಗಳನ್ನು ಡೈನಮಿಕ್‌ ರೇಂಜ್‌ನಲ್ಲಿ ಸೆರೆ ಹಿಡಿಯಬಹುದಾದ ಸಾಮರ್ಥ್ಯ ಈ ಫೋನ್‌ನಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿದೆ. ರೇರ್‌ ಕ್ಯಾಮೆರಾದಲ್ಲಿ ಅಳವಡಿಸಲಾದ ಸ್ಟೂಡಿಯೋ ಲೈಟಿಂಗ್‌ ವ್ಯವಸ್ಥೆಯಿಂದಾಗಿ ಸ್ಪಷ್ಟವಾಗಿ ಚಿತ್ರಗಳನ್ನು ಸೆರೆ ಹಿಡಿಯಲು ಅವಕಾಶವಿದೆ.16 ಮೆಗಾ ಪಿಕ್ಸೆಲ್‌ ರೇರ್‌ ಹಾಗೂ 20 ಮೆಗಾ ಪಿಕ್ಸೆಲ್‌ ಫೇಸಿಂಗ್‌, ಆಪ್ಟಿಕಲ್‌ ಇಮೇಜ್‌ ಮತ್ತು ಎಲೆಕ್ಟ್ರಾನಿಕ್‌ ಸ್ಟೆಬಿಲೈಸೇಷನ್‌ ಫೀಚರ್‌ ಹೊಂದಿರುವ ಕ್ಯಾಮೆರಾ ಒಳಗೊಂಡಿದೆ.

ಅಮೆಜಾನ್‌ಡಾಟ್‌ಇನ್‌, ಒನ್‌ಪ್ಲಸ್‌ಡಾಟ್‌ಇನ್‌, ಕ್ರೋಮಾ ಸ್ಟೋರ್ಸ್‌, ರಿಲಯನ್ಸ್‌ ಡಿಜಿಟಲ್‌ ಮಳಿಗೆಗಳಲ್ಲಿ, ನವೆಂಬರ್‌ 1ರಿಂದ ಖರೀದಿಸಬಹುದಾಗಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಕಾರ್ಲ್‌ ಪೀ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.