ADVERTISEMENT

ಕಚ್ಚಾ ತೈಲ ಉತ್ಪಾದನೆ ಹೆಚ್ಚಳ ನಿರ್ಧಾರ

ಏಜೆನ್ಸೀಸ್
Published 4 ಡಿಸೆಂಬರ್ 2020, 12:24 IST
Last Updated 4 ಡಿಸೆಂಬರ್ 2020, 12:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಯೆನ್ನಾ: ಜನವರಿಯಿಂದ ದಿನಕ್ಕೆ 5 ಲಕ್ಷ ಬ್ಯಾರಲ್‌ಗಳಷ್ಟು ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸಲು ತೈಲ ಉತ್ಪಾದನಾ ರಾಷ್ಟ್ರಗಳು ನಿರ್ಧರಿಸಿವೆ.

ಸೌದಿ ಅರೇಬಿಯಾ, ಇರಾನ್‌, ಇರಾಕ್‌, ಲಿಬಿಯಾ, ಕುವೈತ್, ಯುಎಇ ಸೇರಿದಂತೆ ಕಚ್ಚಾ ತೈಲ ರಫ್ತು ಮಾಡುವ ಒಟ್ಟು 13 ದೇಶಗಳನ್ನೊಳಗೊಂಡ ಸಂಘಟನೆ (ಒಪೆಕ್‌), ರಷ್ಯಾ ಹಾಗೂ ಇತರೆ ದೇಶಗಳು ಈ ನಿರ್ಧಾರ ಕೈಗೊಂಡಿವೆ. ರಷ್ಯಾದ ಉಪಪ್ರಧಾನಿ ಅಲೆಕ್ಸಾಂಡರ್ ನೊವೊಕ್ ಅವರು ಗುರುವಾರ ಈ ವಿಷಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT