ನವದೆಹಲಿ: ಓಪನ್‌ಎಐ, ಈ ವರ್ಷಾಂತ್ಯದ ವೇಳೆಗೆ ನವದೆಹಲಿಯಲ್ಲಿ ತನ್ನ ಮೊದಲ ಭಾರತೀಯ ಕಚೇರಿಯನ್ನು ಸ್ಥಾಪಿಸಲು ನಿರ್ಧರಿಸಿದೆ.
ಇದಕ್ಕಾಗಿ ಉದ್ಯೋಗಿಗಳ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ. ಅಮೆರಿಕದ ನಂತರ ಭಾರತ ಓಪನ್‌ಎಐಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.
ಭಾರತದಲ್ಲಿ ಕಚೇರಿ ಸ್ಥಾಪನೆಯಿಂದ ಚಾಟ್‌ಜಿಪಿಟಿ ಬಳಸುವ ಲಕ್ಷಾಂತರ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ವೃತ್ತಿಪರರು, ಡೆವಲಪರ್‌ಗಳು ಸೇರಿದಂತೆ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಆಗುತ್ತದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.