
ನವದೆಹಲಿ: ಹೆಚ್ಚಿನ ಪ್ರಶ್ನೆಗಳನ್ನು ಕೇಳಲು ಹಾಗೂ ಹೆಚ್ಚು ಚಿತ್ರಗಳನ್ನು ಸೃಷ್ಟಿಸಿಕೊಳ್ಳಲು ಅವಕಾಶ ನೀಡುವ ‘ಚಾಟ್‌ಜಿಪಿಟಿ ಗೊ’ ಆವೃತ್ತಿಯನ್ನು ಭಾರತದ ಬಳಕೆದಾರರಿಗೆ ಒಂದು ವರ್ಷದ ಅವಧಿಗೆ ಉಚಿತವಾಗಿ ನೀಡುವುದಾಗಿ ಓಪನ್‌ಎಐ ಕಂಪನಿ ಮಂಗಳವಾರ ಹೇಳಿದೆ.
ನವೆಂಬರ್ 4ರಿಂದ ಆರಂಭವಾಗುವ ಸೀಮಿತ ಅವಧಿಯ ಕೊಡುಗೆ ಸಂದರ್ಭದಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಬಳಕೆದಾರರಿಗೆ ಮಾತ್ರ ಇದು ಸಿಗಲಿದೆ.
‘ಚಾಟ್‌ಜಿಪಿಟಿ ಗೊ’ ಆವೃತ್ತಿಯನ್ನು ಚಂದಾ ಆಧಾರದಲ್ಲಿ ಓಪನ್‌ಎಐ ಕಂಪನಿಯು ಆಗಸ್ಟ್‌ನಲ್ಲಿ ಅನಾವರಣ ಮಾಡಿದೆ. ಇದನ್ನು ಅನಾವರಣಗೊಳಿಸಿದ ಒಂದೇ ತಿಂಗಳಲ್ಲಿ ಭಾರತದಲ್ಲಿ ಚಾಟ್‌ಜಿಪಿಟಿ ಚಂದಾದಾರರ ಸಂಖ್ಯೆಯು ಎರಡು ಪಟ್ಟಿಗಿಂತ ಹೆಚ್ಚಳ ಕಂಡಿದೆ. ಓಪನ್‌ಎಐ ಪಾಲಿಗೆ ಭಾರತವು ಎರಡನೆಯ ಅತಿದೊಡ್ಡ ಮಾರುಕಟ್ಟೆಯಾಗಿದೆ.
‘ಚಾಟ್‌ಜಿಪಿಟಿ ಗೊ’ ಆವೃತ್ತಿಗೆ ಈಗಾಗಲೇ ಚಂದಾದಾರರಾಗಿರುವ ಭಾರತದ ಗ್ರಾಹಕರು ಕೂಡ 12 ತಿಂಗಳ ಉಚಿತ ಕೊಡುಗೆಗೆ ಅರ್ಹರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.