ನವದೆಹಲಿ: ಭಾರತದ ಮಾರುಕಟ್ಟೆಗೆ ಸುಜುಕಿ ಕಂಪನಿ ಪ್ರವೇಶಿಸಲು ಕಾರಣರಾಗಿದ್ದ ಜಪಾನ್‌ನ ಒಸಾಮು ಸುಜುಕಿ (94) ಅವರು ನಿಧನರಾಗಿದ್ದಾರೆ.
ನಾಲ್ಕು ದಶಕದವರೆಗೆ ಸುಜುಕಿ ಕಂಪನಿಯನ್ನು ಮುನ್ನಡೆಸಿದ್ದು ಅವರು ಹೆಗ್ಗಳಿಕೆಯಾಗಿದೆ. ಲಿಂಫೋಮಾ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಡಿಸೆಂಬರ್ 25ರಂದು ನಿಧನರಾಗಿದ್ದಾರೆ ಎಂದು ಜಪಾನ್‌ನ ಸುಜುಕಿ ಮೋಟರ್ ಕಂಪನಿ ಶುಕ್ರವಾರ ತಿಳಿಸಿದೆ.
1981ರಲ್ಲಿ ಭಾರತದ ಮಾರುತಿ ಉದ್ಯೋಗ್ ಲಿಮಿಟೆಡ್‌ನೊಂದಿಗೆ ಸುಜುಕಿ ಪಾಲುದಾರಿಕೆ ಹೊಂದುವಲ್ಲಿ ಅವರು ನಿರ್ಣಾಯಕ ಪಾತ್ರವಹಿಸಿದ್ದರು. ಆ ಮೂಲಕ ದೇಶದ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಗೆ ಕಾರಣರಾಗಿದ್ದು, ಅವರ ಹಿರಿಮೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.