ADVERTISEMENT

‘ಪ್ಯಾನ್‌’, ಆಧಾರ್‌ ಜೋಡಣೆ ಗಡುವು 6 ತಿಂಗಳು ವಿಸ್ತರಣೆ

ಪಿಟಿಐ
Published 31 ಮಾರ್ಚ್ 2019, 17:35 IST
Last Updated 31 ಮಾರ್ಚ್ 2019, 17:35 IST
   

ನವದೆಹಲಿ: ಆಧಾರ್‌ ಜತೆ, ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರ್ಕಾರ 6 ತಿಂಗಳ ಕಾಲ ಮುಂದೂಡಿದೆ.

ಈ ಗಡುವು ಈಗ ಸೆಪ್ಟೆಂಬರ್‌ 30ರವರೆಗೆ ವಿಸ್ತರಣೆಯಾಗಿದೆ. ವ್ಯಕ್ತಿಗಳು ತಮ್ಮ ‘ಪ್ಯಾನ್‌’ ಸಂಖ್ಯೆಯನ್ನು ಆಧಾರ್‌ ಜತೆ ಜೋಡಿಸುವುದಕ್ಕೆ 6ನೇ ಬಾರಿಗೆ ಗಡುವು ವಿಸ್ತರಣೆ ಮಾಡಿದಂತಾಗಿದೆ. 2019ರ ಮಾರ್ಚ್‌ 31ರ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಸರ್ಕಾರ 2018ರ ಜೂನ್‌ನಲ್ಲಿ ತಿಳಿಸಿತ್ತು.

ಐಟಿಆರ್‌ ಸಲ್ಲಿಸುವಾಗ ಆಧಾರ್‌ ಸಂಖ್ಯೆ ಉಲ್ಲೇಖಿಸುವುದು ಸುಪ್ರೀಂಕೋರ್ಟ್‌ ಆದೇಶದ ಅನ್ವಯ ಇದೇ ಏಪ್ರಿಲ್ 1ರಿಂದ ಕಡ್ಡಾಯವಾ
ಗಿರಲಿದೆ. ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯವಾಗಿಲ್ಲ. ದೂರಸಂಪರ್ಕ ಸೇವಾ ಸಂಸ್ಥೆಗಳು ಮೊಬೈಲ್‌ ಸಂಪರ್ಕಕ್ಕೆ ಆಧಾರ್‌ ಜೋಡಣೆಗೆ ಪಟ್ಟು ಹಿಡಿಯಬಾರದು ಎಂದು ಕೋರ್ಟ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.