ADVERTISEMENT

2 ತಿಂಗಳಲ್ಲಿ ಮೊದಲ ಬಾರಿ ಪೆಟ್ರೋಲ್ ಬೆಲೆ ಏರಿಕೆ

ಪಿಟಿಐ
Published 28 ಸೆಪ್ಟೆಂಬರ್ 2021, 8:57 IST
Last Updated 28 ಸೆಪ್ಟೆಂಬರ್ 2021, 8:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪೆಟ್ರೋಲ್‌ ದರವನ್ನು ಮಂಗಳವಾರ ಲೀಟರ್‌ಗೆ 20 ಪೈಸೆ ಮತ್ತು ಡೀಸೆಲ್‌ ದರವನ್ನು ಲೀಟರ್‌ಗೆ 25 ಪೈಸೆ ಏರಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ಯಾರಲ್‌ಗೆ 80 ಡಾಲರ್‌ ಗಡಿ ತಲುಪಿದೆ. ಈ ದರ ಏರಿಕೆಗೆ ಕಾರಣವಾಗಿದೆ.

ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್ ದರ ₹ 101.39 ಇದ್ದರೆ, ಮುಂಬೈನಲ್ಲಿ ₹ 107.47 ಆಗಿದೆ. ಡೀಸೆಲ್‌ ದರ ಲೀಟರ್‌ಗೆ ದೆಹಲಿಯಲ್ಲಿ ₹ 89.57 ಮತ್ತು ಮುಂಬೈನಲ್ಲಿ ₹ 97.21 ಆಗಿದೆ ಎಂದು ಆಯಾ ರಾಜ್ಯಗಳ ಇಂಧನ ವಿತರಕರ ಪತ್ರಿಕಾ ಹೇಳಿಕೆ ತಿಳಿಸಿದೆ.

ಸ್ಥಳೀಯ ತೆರಿಗೆಯನ್ನು ಆಧರಿಸಿ ದರ ರಾಜ್ಯದಿಂದ ರಾಜ್ಯಗಳಿಗೆ ಭಿನ್ನವಾಗಿರಲಿದೆ. ಕಳೆದ ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್‌ ದರ ಏರಿಕೆ ಕಂಡಿದ್ದರೆ, ಡೀಸೆಲ್‌ ದರವು ನಾಲ್ಕನೇ ಬಾರಿಗೆ ಏರಿಕೆಯಾಗಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಸತತ ಐದನೇ ದಿನವೂ ಏರಿಕೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.