ADVERTISEMENT

ಆಗಸ್ಟ್‌ನಲ್ಲಿ ಪೆಟ್ರೋಲ್‌ ಬೇಡಿಕೆ ಹೆಚ್ಚಳ

ಪಿಟಿಐ
Published 1 ಸೆಪ್ಟೆಂಬರ್ 2021, 13:20 IST
Last Updated 1 ಸೆಪ್ಟೆಂಬರ್ 2021, 13:20 IST
ಪೆಟ್ರೋಲ್‌–ಪ್ರಾತಿನಿಧಿಕ ಚಿತ್ರ
ಪೆಟ್ರೋಲ್‌–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಗಸ್ಟ್‌ನಲ್ಲಿ ಪೆಟ್ರೋಲ್‌ ಮಾರಾಟ ಹೆಚ್ಚಾಗಿದೆ, ಡೀಸೆಲ್ ಮಾರಾಟ ಇಳಿಕೆ ಕಂಡಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರಾಥಮಿಕ ಮಾಹಿತಿ ನೀಡಿವೆ.

ಪೆಟ್ರೋಲ್‌ ಮಾರಾಟವು ಈಗಾಗಲೇ ಕೋವಿಡ್‌ ಪೂರ್ವದ ಮಟ್ಟಕ್ಕೆ ಬಂದಿದೆ. ಡೀಸೆಲ್‌ ಮಾರಾಟ ಇಳಿಕೆ ಕಾಣುತ್ತಲೇ ಇದೆ ಎಂದು ಅವು ಹೇಳಿವೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟಗಾರರು ಆಗಸ್ಟ್‌ನಲ್ಲಿ 24.3 ಲಕ್ಷ ಟನ್‌ ಪೆಟ್ರೋಲ್‌ ಮಾರಾಟ ಮಾಡಿದ್ದು, ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಮಾರಾಟವು ಶೇಕಡ 13.6ರಷ್ಟು ಹೆಚ್ಚಾಗಿದೆ. ಕೋವಿಡ್‌ಗೂ ಮುಂಚಿನ ಮಟ್ಟಕ್ಕೆ ಹೋಲಿಸಿದರೆ ಶೇ 4.1ರಷ್ಟು ಹೆಚ್ಚಿಗೆ ಇದೆ.

ADVERTISEMENT

ಡೀಸೆಲ್‌ ಮಾರಾಟವು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇ 15.9ರಷ್ಟು ಹೆಚ್ಚಾಗಿದ್ದು 49.4 ಲಕ್ಷ ಟನ್‌ಗಳಷ್ಟಾಗಿದೆ. ಆಗದರೆ 2019ರ ಆಗಸ್ಟ್‌ಗೆ ಹೋಲಿಸಿದರೆ ಶೇ 9.8ರಷ್ಟು ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.