ADVERTISEMENT

ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2021, 6:05 IST
Last Updated 7 ಅಕ್ಟೋಬರ್ 2021, 6:05 IST
ವಾಹನಕ್ಕೆ ಇಂಧನ ಹಾಕುತ್ತಿರುವುದು
ವಾಹನಕ್ಕೆ ಇಂಧನ ಹಾಕುತ್ತಿರುವುದು   

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಮೂರನೇ ದಿನವೂ ಏರಿಕೆಯಾಗಿದೆ. ಗುರುವಾರ ಇಂಧನ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ‌ ದರ ಇಳಿಕೆಯಾಗಿದ್ದರೂ, ದೇಶದಲ್ಲಿ ಪ್ರತಿ ಪೆಟ್ರೋಲ್ ದರ 30 ಪೈಸೆ ಮತ್ತು ಡೀಸೆಲ್ 35 ಪೈಸೆ ಹೆಚ್ಚಳ ಕಂಡಿದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ₹103.24 ಇದ್ದರೆ, ಮುಂಬೈನಲ್ಲಿ ₹109 ದಾಟಿದೆ. ಕೋಲ್ಕತ್ತದಲ್ಲಿ ₹103.94, ಚೆನ್ನೈನಲ್ಲಿ ₹100.86 ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹106.83 ಆಗಿದೆ.

ADVERTISEMENT

ದೇಶದ ಇಪ್ಪತ್ತಕ್ಕೂ ಹೆಚ್ಚು ನಗರಗಳಲ್ಲಿ ಪೆಟ್ರೋಲ್ ದರ ₹100ಕ್ಕಿಂತಲೂ ಹೆಚ್ಚಿದೆ. ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ದರವಿದೆ. ದೇಶದಲ್ಲೇ ಅತಿ ಹೆಚ್ಚು‌ ಪೆಟ್ರೋಲ್ ದರ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ದಾಖಲಾಗಿದೆ. ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ₹114.92 ಇದೆ.

ಇನ್ನೂ ಕೆಲವು ದಿನ ತೈಲ ದರ ಏರಿಕೆ ಮುಂದುವರಿದರೆ, ಬಹುತೇಕ ನಗರಗಳಲ್ಲಿ ಡೀಸೆಲ್ ದರ ಸಹ ನೂರರ ಗಡಿ ದಾಟಲಿದೆ. ಮುಂಬೈನಲ್ಲಿ ಡೀಸೆಲ್ ದರ ₹99.55, ಬೆಂಗಳೂರಿನಲ್ಲಿ ₹97.40 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.