ಬೆಂಗಳೂರು:ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಕಚ್ಚಾ ತೈಲ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆಯಾಗುತ್ತಿದೆ.ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಆರನೇ ದಿನವೂ ಇಂಧನ ದರದಲ್ಲಿ ಏರಿಕೆ ಮಾಡಿವೆ.
ಬೆಂಗಳೂರಿನಲ್ಲಿ ಭಾನುವಾರ ಪ್ರತಿ ಲೀಟರ್ ಪೆಟ್ರೋಲ್ ದರ 28ಪೈಸೆ ಹೆಚ್ಚಾಗಿ ₹76.14 ಮತ್ತು ಡೀಸೆಲ್ ದರ 21ಪೈಸೆ ಹೆಚ್ಚಾಗಿ ₹69.01ರಂತೆ ಮಾರಾಟವಾಯಿತು.
ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಡ್ರೋನ್ ದಾಳಿ ನಡೆದಾಗಿನಿಂದ ಇಲ್ಲಿಯವರೆಗೆ ಅಂದರೆ, ಭಾನುವಾರದವರೆಗೆ ಪ್ರತಿ ಲೀಟರ್ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕ್ರಮವಾಗಿ ₹2.1 ಮತ್ತು ₹1.71ರಂತೆ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.